February 4, 2026
Wednesday, February 4, 2026
spot_img

Relationship | ಗಾಯ ಮಾಡುವುದು ಹೊರಗಿನವರಾದರೆ, ಅದಕ್ಕೆ ಉಪ್ಪು ಸುರಿಯುವುದು ನಮ್ಮವರೇ!

ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡಕ್ಕೆ ಹೊರಗಿನ ಶತ್ರುಗಳಿಗಿಂತ ಮನೆಯೊಳಗಿನ ‘ಮಾತಿನ ಯುದ್ಧ’ಗಳೇ ಹೆಚ್ಚು ಕಾರಣವಾಗುತ್ತಿವೆ. ಅಪರಿಚಿತರು ಆಡುವ ಟೀಕೆಗಳನ್ನು ಸುಲಭವಾಗಿ ಮರೆಯುವ ಮನುಷ್ಯ, ತನ್ನ ಆಪ್ತರು ಆಡುವ ಒಂದೇ ಒಂದು ಕಟು ಮಾತನ್ನು ಜೀವನಪೂರ್ತಿ ಮರೆಯಲಾಗದೆ ಕುಸಿಯುತ್ತಿದ್ದಾನೆ.

ನಾವು ಯಾರನ್ನು ಅತಿಯಾಗಿ ಹಚ್ಚಿಕೊಳ್ಳುತ್ತೇವೆಯೋ ಅವರ ಮಾತುಗಳು ನಮ್ಮ ಮೆದುಳಿನ ಮೇಲೆ ಆಳವಾದ ಪ್ರಭಾವ ಬೀರುತ್ತವೆ. “ನಮ್ಮವರು” ಎಂಬ ಭದ್ರಕೋಟೆಯೊಳಗೆ ಕುಳಿತಿರುವಾಗ ಅನಿರೀಕ್ಷಿತವಾಗಿ ಬರುವ ಟೀಕೆಗಳು ಮಾನಸಿಕ ಸಮತೋಲನವನ್ನು ತಪ್ಪಿಸುತ್ತಿವೆ. ಪ್ರೀತಿ ಇರುವ ಕಡೆ ನಿರೀಕ್ಷೆಗಳೂ ಇರುತ್ತವೆ, ಆ ನಿರೀಕ್ಷೆಗಳು ಭಗ್ನಗೊಂಡಾಗ ‘ಮಾತು’ ಕೇವಲ ಶಬ್ದವಾಗಿ ಉಳಿಯದೆ ಆಯುಧವಾಗಿ ಮಾರ್ಪಡುತ್ತಿದೆ.

ನಾವು ನಮ್ಮವರ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿರುತ್ತೇವೆ. ಅವರು ನಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇರುತ್ತದೆ. ಆ ನಿರೀಕ್ಷೆ ಸುಳ್ಳಾದಾಗ ನೋವು ದುಪ್ಪಟ್ಟಾಗುತ್ತದೆ.

ನಮ್ಮವರಿಗೆ ನಮ್ಮ ಪ್ಲಸ್ ಮತ್ತು ಮೈನಸ್ ಎರಡೂ ತಿಳಿದಿರುತ್ತದೆ. ಎಲ್ಲಿ ಹೊಡೆದರೆ ಹೆಚ್ಚು ನೋವಾಗುತ್ತದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಅವರ ಮಾತುಗಳು ನೇರವಾಗಿ ನಮ್ಮ ಮನಸ್ಸಿಗೆ ತಾಕುತ್ತವೆ.

ಹೊರಗಿನವರನ್ನು ನಾವು ನಿರ್ಲಕ್ಷಿಸಬಹುದು, ಆದರೆ ಮನೆಯವರನ್ನಲ್ಲ. ಅವರೊಂದಿಗೆ ನಾವು ಪ್ರತಿದಿನ ಬಾಳಬೇಕಿರುವುದರಿಂದ, ಅವರ ಮಾತುಗಳು ಮನಸ್ಸಿನಲ್ಲಿ ಪದೇ ಪದೇ ಪ್ರತಿಧ್ವನಿಸುತ್ತಿರುತ್ತವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !