February 5, 2026
Thursday, February 5, 2026
spot_img

ರಾಜ್ಯಪಾಲರ ಸಿಗ್ನೇಚರ್ ಫೋರ್ಜರಿ: ನಕಲಿ ಐಎಎಸ್‌ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಆದೇಶಗಳನ್ನು ಹೊರಡಿಸಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನ ವಿರುದ್ಧ ಪೊಲೀಸರು ಗಂಭೀರ ತನಿಖೆ ಆರಂಭಿಸಿದ್ದಾರೆ.

ಎಚ್‌.ಎನ್‌. ಸುಜಯೇಂದ್ರ (45) ಎಂಬಾತನ್ನನ್ನು ಐಎಎಸ್‌, ಐಪಿಎಸ್‌ ಅಧಿಕಾರಿ ಎಂದು ತೋರಿಸಿಕೊಂಡು ವಂಚನೆ ನಡೆಸಿದ್ದಾನೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಸುಜಯೇಂದ್ರ ರಾಜ್ಯಪಾಲರ ಹೆಸರಿನ ಲೆಟರ್‌ಹೆಡ್‌ ಬಳಸಿಕೊಂಡು, ಅವರ ಸಹಿಯನ್ನು ನಕಲು ಮಾಡಿ ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಶ್ವವಿದ್ಯಾಲಯದ ಕುಲಪತಿ ನೇಮಕಾತಿಗೆ ಸಂಬಂಧಿಸಿದಂತೆ ನಕಲಿ ಆದೇಶ ಹೊರಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:

ಈ ಪ್ರಕರಣ ಮೊದಲು 2026ರ ಜನವರಿ 5ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿ ವಿಜಯನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಹಿನ್ನೆಲೆ ಜನವರಿ 21ರಂದು ಪ್ರಕರಣವನ್ನು ವಿಜಯನಗರ ಠಾಣೆಗೆ ವರ್ಗಾಯಿಸಲಾಗಿದೆ. ಇದೀಗ ಪೊಲೀಸರು ವಿಚಾರಣೆಯನ್ನು ವೇಗಗೊಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಸುಜಯೇಂದ್ರ ವಿರುದ್ಧ ಇದಕ್ಕೂ ಮುನ್ನ ಹಲವು ವಂಚನೆ ಪ್ರಕರಣಗಳು ದಾಖಲಾಗಿವೆ. 2025ರ ನವೆಂಬರ್‌ನಲ್ಲಿ ದೇವನಹಳ್ಳಿ ಪ್ರದೇಶದಲ್ಲಿ ಆಯುರ್ವೇದ ಆಸ್ಪತ್ರೆ ನಿರ್ಮಿಸುವ ಹೆಸರಿನಲ್ಲಿ ಜಮ್ಮು-ಕಾಶ್ಮೀರದ ವೈದ್ಯರಿಂದ ಕೋಟಿ ರೂಪಾಯಿ ವಸೂಲಿ ಮಾಡಿದ ಆರೋಪದಲ್ಲಿ ಈತ ಬಂಧಿತನಾಗಿದ್ದ. ಚೆಕ್ ಬೌನ್ಸ್ ಪ್ರಕರಣಗಳೂ ದಾಖಲಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !