February 5, 2026
Thursday, February 5, 2026
spot_img

GOLD RATE | ಇದೀಗ ಗೋಲ್ಡ್‌ ಅಂಗಡಿ ಕಡೆ ಕಣ್ಣೆತ್ತಿ ನೋಡ್ಬೋದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳೆದೊಂದು ತಿಂಗಳಿಂದ ಭಾರಿ ಏರಿಕೆಯಲ್ಲಿದ್ದ ಚಿನ್ನದ ದರದಲ್ಲಿ ಇತ್ತೀಚೆಗೆ ಇಳಿಕೆಯ ಹಾದಿಗೆ ಮರಳಿದೆ. ಗುರುವಾರ ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ ಕಂಡು ಬಂದಿದೆ.

ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 460 ರುಪಾಯಿ ಇಳಿಕೆ ಕಂಡು ಬಂದು, 14,155 ರುಪಾಯಿ ಆಗಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 502 ರುಪಾಯಿ ಕಡಿಮೆಯಾಗಿ 15,442 ರುಪಾಯಿಗೆ ಬಂದು ತಲುಪಿದೆ.

ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,13,240 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,41,550 ರುಪಾಯಿ ಹಾಗೂ 100 ಗ್ರಾಂಗೆ ನೀವು 14,15,500 ರುಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,23,536 ರುಪಾಯಿ ಹಾಗೂ 10 ಗ್ರಾಂಗೆ ನೀವು 1,54,420 ರುಪಾಯಿ ಹಾಗೂ 100 ಗ್ರಾಂಗೆ ನೀವು 15,44,200 ರುಪಾಯಿ ನೀಡಬೇಕಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !