April 24, 2026
Friday, April 24, 2026
spot_img

ಹರಕೆ ತೀರಲೇಬೇಕು, ಆಕ್ಸಿಜನ್‌ ಸಿಲಿಂಡರ್‌ ಜತೆಗೇ ಮಾಯಕ್ಕ ದೇವಿ ದರುಶನ ಪಡೆದ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಕ್ತಿಯ ಶಕ್ತಿ ಎಲ್ಲವನ್ನೂ ಮೀರಿಸುವಂತದ್ದು, ಕಷ್ಟಗಳನ್ನು ಕೊಡಬೇಡ ಎಂದು ಬೇಡಿಕೊಳ್ಳುವುದಿಲ್ಲ, ಆದರೆ ಬರುವ ಎಲ್ಲ ಕಷ್ಟಗಳನ್ನು ಸಹಿಸುವ ಶಕ್ತಿ ಕೊಡು, ಪ್ರತೀ ನಡೆಗೂ ಜತೆಗಿರು ಎಂದು ಭಕ್ತರು ಬೇಡುತ್ತಾರೆ.

ಇಲ್ಲೊಬ್ಬ ಭಕ್ತೆ ಆಕ್ಸಿಜನ್‌ ಸಿಲಿಂಡರ್‌ ಜತೆಗೆ ದೇವಿ ದರುಶನಕ್ಕೆ ಬಂದಿದ್ದಾರೆ, ಮೂಗಿಗೆ ಪೈಪ್‌ ಹಾಕಿಕೊಂಡಿದ್ದರೆ, ಪತಿ ಕೈಯಲ್ಲಿ ಆಕ್ಸಿಜನ್‌ ಸಿಲಿಂಡರ್‌ ಇದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದ ಮಾಯಕ್ಕ ದೇವಿ ಜಾತ್ರೆಯಲ್ಲಿ ಈ ಜೋಡಿ ಕಂಡುಬಂದಿದೆ. ತೀವ್ರ ಉಸಿರಾಟದ ತೊಂದರೆ ಇದ್ದರೂ ಹರಕೆ ತೀರಿಸಲು ದಂಪತಿ ದೇಗುಲಕ್ಕೆ ಬಂದಿದ್ದಾರೆ.

ಭರತ ಹುಣ್ಣಿಮೆ ಪ್ರಯುಕ್ತ ಚಿಂಚಲಿ ಮಾಯಕ್ಕ ದೇವಿ ಜಾತ್ರೆಗೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಆಕ್ಸಿಜನ್‌ ಸಿಲಿಂಡರ್‌ ಹಿಡಿದುಕೊಂಡು ಬಂದ ಪತಿ, ಪತ್ನಿಗೆ ಯಾವುದೇ ತೊಂದರೆ ಆಗದಂತೆ ದೇವಿಯ ದರುಶನ ಮಾಡಿಸಿದ್ದಾರೆ.

ಮಹಾರಾಷ್ಟ್ರದ ಪಂಢರಪುರದಿಂದ ಬಂದಿದ್ದೇವೆ, 15 ವರ್ಷಗಳಿಂದ ಈ ಜಾತ್ರೆಯನ್ನು ಮಿಸ್‌ ಮಾಡಿಲ್ಲ. ಹೆಂಡತಿಗೆ ಉಸಿರಾಟದ ಸಮಸ್ಯೆ ಇದೆ. ಆದರೆ ದರುಶನಕ್ಕೆ ಅದು ಅಡ್ಡಿಯಲ್ಲ. ದೇವಿ ದರುಶನ ಮಾಡಿ ತೃಪ್ತಿಯಾಗಿದೆ ಎಂದು ಪತಿ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !