February 5, 2026
Thursday, February 5, 2026
spot_img

ಮುಂದುವರಿದ ಟೆಕ್ ಕಂಪನಿಗಳ ಲೇ ಆಫ್‌: AI ಹೂಡಿಕೆ ಕಾರಣವಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಟೆಕ್ ವಲಯದಲ್ಲಿ ಆತಂಕ ಹುಟ್ಟಿಸುವ ಸುದ್ದಿ ಕೇಳಿಬರುತ್ತಿದೆ. ಪ್ರಮುಖ ಸಾಫ್ಟ್‌ವೇರ್ ಕಂಪನಿ ಒರಾಕಲ್ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ಬಿಡಿಸುವ ಯೋಜನೆ ಮಾಡುತ್ತಿದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಬಂದಿಲ್ಲ. ಹೂಡಿಕೆ ಸಂಸ್ಥೆಯೊಂದು ಪ್ರಕಟಿಸಿದ ವಿಶ್ಲೇಷಣೆಯ ಪ್ರಕಾರ, 20,000 ರಿಂದ 30,000 ಮಂದಿ ವರೆಗೆ ಉದ್ಯೋಗ ಕಡಿತ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ನಿರ್ಧಾರದ ಹಿಂದೆ ಕಂಪನಿ ನಡೆಸುತ್ತಿರುವ ಭಾರೀ ಎಐ ಹೂಡಿಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಡೇಟಾ ಸೆಂಟರ್ ವಿಸ್ತರಣೆಗಾಗಿ ದೊಡ್ಡ ಮಟ್ಟದ ಹಣಕಾಸು ಅಗತ್ಯವಾಗಿದ್ದು, ಇದರಿಂದ ಒರಾಕಲ್ ಮೇಲೆ ಸಾಲದ ಒತ್ತಡ ಹೆಚ್ಚಾಗಿದೆ. ಈಗಾಗಲೇ ಕಂಪನಿಯ ಸಾಲವು 100 ಬಿಲಿಯನ್ ಡಾಲರ್ ಗಡಿಯನ್ನು ದಾಟಿದೆ ಎನ್ನಲಾಗುತ್ತಿದ್ದು, ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಿರುವುದರಿಂದ ಆರ್ಥಿಕ ಒತ್ತಡ ಮತ್ತಷ್ಟು ತೀವ್ರವಾಗಿದೆ.

ಇದನ್ನೂ ಓದಿ:

ಎಐ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಕೈಗೊಂಡ ದೊಡ್ಡ ಯೋಜನೆಗಳು ಕಂಪನಿಗೆ ದೊಡ್ಡ ಹೊರೆ ಆಗಿವೆ. ಹೀಗಾಗಿ ಕಂಪನಿ ಕೆಲವು ಆಸ್ತಿಗಳನ್ನು ಮಾರಾಟ ಮಾಡುವ ಸಾಧ್ಯತೆಯೂ ಇದೆ ಎಂದು ವರದಿಗಳು ಸೂಚಿಸುತ್ತಿವೆ. ಜೊತೆಗೆ, ಹೊಸ ಗ್ರಾಹಕರಿಂದ ಮುಂಗಡ ಹಣ ಪಡೆದು ಒಪ್ಪಂದ ಮಾಡಲು ಪ್ರಯತ್ನಿಸಲಾಗುತ್ತಿದೆ ಎನ್ನಲಾಗಿದೆ.

ಇನ್ನೊಂದೆಡೆ, ಎಐ ಪಾಲುದಾರಿಕೆಗಳಿಗೆ ಸಂಬಂಧಿಸಿದ ಯೋಜನೆಗಳಲ್ಲಿ ಬದಲಾವಣೆಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಲೇಆಫ್ ಕುರಿತು ಒರಾಕಲ್ ಇನ್ನೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಕಂಪನಿಯ ನಿರ್ಧಾರಗಳು ಉದ್ಯೋಗಿಗಳ ಭವಿಷ್ಯ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !