February 5, 2026
Thursday, February 5, 2026
spot_img

ಉಬರ್, ಓಲಾಗೆ ಟಕ್ಕರ್…ಭಾರತ್ ಟ್ಯಾಕ್ಸಿಗೆ ಚಾಲನೆ ನೀಡಿದ ಕೇಂದ್ರ ಸಚಿವ ಅಮಿತ್​ ಶಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿರುವ “ಭಾರತ್ ಟ್ಯಾಕ್ಸಿ” ಸಹಕಾರಿ ಟ್ಯಾಕ್ಸಿ ಸೇವೆಗೆ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್​ ಶಾ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಭಾರತ್ ಟ್ಯಾಕ್ಸಿಯನ್ನು ಮೊಬಿಲಿಟಿ ವಲಯದಲ್ಲಿ ಒಂದು ಪ್ರಮುಖ ಹೆಜ್ಜೆ. ಇಲ್ಲಿ ಚಾಲಕರನ್ನು ಸಾರಥಿಗಳು ಎಂದು ಕರೆಯಲಾಗುತ್ತಿದ್ದು, ಅವರಿಗೆ ಮಾಲೀಕತ್ವ, ಕಾರ್ಯಾಚರಣೆ ಹಾಗೂ ಆದಾಯ ಸೃಷ್ಟಿಗೆ ಪ್ರಮುಖ ಸ್ಥಾನ ನೀಡಲಾಗಿದೆ ಎಂದು ತಿಳಿಸಿದರು.

ಭಾರತ್ ಟ್ಯಾಕ್ಸಿ, ತನ್ನ ಪ್ಲಾಟ್‌ಫಾರ್ಮ್‌ಯಲ್ಲಿನ ದರಗಳು ಮಾರುಕಟ್ಟೆ ದರಕ್ಕಿಂತಲೂ 30% ವರೆಗೆ ಕಡಿಮೆ ಇರಲಿದೆ ಎನ್ನಲಾಗಿದ್ದು, ಈ ಅಪ್ಲಿಕೇಶನ್ ಯಾವುದೇ ಸರ್ಜ್ ಬೆಲೆ ನಿಗದಿಯನ್ನು ಹೊಂದಿಲ್ಲ. ಭಾರತ್ ಟ್ಯಾಕ್ಸಿಯಲ್ಲಿ, ಪ್ರಯಾಣಿಕರು ಪೂರ್ವನಿರ್ಧರಿತ, ಪಾರದರ್ಶಕ ದರವನ್ನು ಮಾತ್ರವೇ ಪಾವತಿಸುತ್ತಾರೆ. ಜೊತೆಗೆ ಪ್ರಯಾಣಿಕರು ಇಲ್ಲಿಯೂ ಸಹ ಬೈಕ್, ಆಟೋ ಮತ್ತು ಕಾರಿನ ಆಯ್ಕೆಯಿಂದ ತಮ್ಮ ಆದ್ಯತೆಯ ಪ್ರಯಾಣ ವಿಧಾನವನ್ನು ಆಯ್ಕೆ ಮಾಡಬಹುದಾಗಿದೆ.

ಕೇಂದ್ರ ಸರ್ಕಾರವು ಸಹಕಾರ ಮಾದರಿಯಲ್ಲಿ ಆರಂಭಿಸಿರುವ ಹೊಸ ಕ್ಯಾಬ್ ಸೇವೆ ಭಾರತ್ ಟ್ಯಾಕ್ಸಿ. ಉಬರ್, ಓಲಾ ರೀತಿಯ ಖಾಸಗಿ ಕಂಪನಿಗಳಂತೆ ಕಾರ್ಯನಿರ್ವಹಿಸಿದರೂ, ಮೂಲಭೂತವಾಗಿ ವಿಭಿನ್ನವಾದ ಮಾದರಿಯನ್ನು ಹೊಂದಿದೆ.ಇಲ್ಲಿ ಚಾಲಕರೇ ಮಾಲೀಕರಾಗಿದ್ದು, ಕಂಪನಿ ಮಧ್ಯವರ್ತಿಯಾಗಿ ದೊಡ್ಡ ಕಮಿಷನ್ ವಸೂಲಿ ಮಾಡುವ ವ್ಯವಸ್ಥೆ ಇರುವುದಿಲ್ಲ.

ಇದರ ಜೊತೆಗೆ ಇಲ್ಲಿ ಈ ವೇದಿಕೆಗೆ ಸೇರುವ ಪ್ರತಿಯೊಬ್ಬ ಚಾಲಕನಿಗೆ ಸರ್ಕಾರದಿಂದಲೇ ₹5 ಲಕ್ಷ ವೈಯಕ್ತಿಕ ಅಪಘಾತ ವಿಮೆ ಜೊತೆಗೆ ₹5 ಲಕ್ಷ ಕುಟುಂಬ ಆರೋಗ್ಯ ವಿಮೆಯನ್ನು ಸಹ ಒದಗಿಸಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !