February 6, 2026
Friday, February 6, 2026
spot_img

LIFE | ನಿಮ್ಮ ಜೊತೆ ಮಾತನಾಡೋ ಸಮಯ ನಿಮಗೆ ಇದ್ಯಾ? ಸ್ವಲ್ಪ ಪುರುಸೊತ್ತು ಮಾಡ್ಕೊಳಿ!

ದಿನ ಪೂರ್ತಿ ಫೋನ್‌ ಕರೆಗಳು, ಮೆಸೇಜ್‌ಗಳು, ಕೆಲಸದ ಒತ್ತಡ, ಮನೆಯ ಜವಾಬ್ದಾರಿಗಳು… ಎಲ್ಲರ ಜೊತೆ ಮಾತನಾಡ್ತಾ ಮಾತನಾಡ್ತಾ ದಿನ ಮುಗಿದು ಹೋಗುತ್ತೆ. ಆದರೆ ಒಂದು ಪ್ರಶ್ನೆ ಕೇಳಿಕೊಂಡ್ರೆ ಉತ್ತರ ಸಿಗೋದು ಕಷ್ಟ – ನಮ್ಮ ಜೊತೆ ನಾವು ಮಾತನಾಡೋ ಸಮಯ ನಮಗೆ ಇದೆಯಾ?

ನಾವು ಯಾರಾದ್ರೂ ಬೇಸರದಲ್ಲಿದ್ದರೆ ಕೇಳ್ತೀವಿ, ಸಮಾಧಾನ ಮಾಡ್ತೀವಿ, ಅವರ ನೋವು ಅರ್ಥಮಾಡಿಕೊಳ್ಳೋ ಪ್ರಯತ್ನ ಮಾಡ್ತೀವಿ. ಆದರೆ ನಮ್ಮ ಮನಸ್ಸು ಏನು ಹೇಳ್ತಿದೆ ಅನ್ನೋದನ್ನ ಕೇಳೋಕೆ ನಾವು ವಿರಾಮ ಕೊಡ್ತೀವಾ? ಒಳಗೆ ತುಂಬಾ ವಿಚಾರಗಳು ನಡೆಯುತ್ತಿರುತ್ತವೆ. ಸಂತೋಷ, ಅಸಮಾಧಾನ, ಗೊಂದಲ, ಕನಸುಗಳು – ಇವೆಲ್ಲವೂ ಮೌನವಾಗಿ ನಮ್ಮೊಳಗೆ ಮಾತಾಡುತ್ತಿರುತ್ತವೆ. ಆದರೆ ಆ ಧ್ವನಿಗೆ ನಾವು ಗಮನ ಕೊಡದೇ ಹೋಗ್ತೀವಿ.

ಕೆಲಸ ಮುಗಿದ ಮೇಲೆ ಸ್ವಲ್ಪ ಸಮಯ ಸಿಕ್ಕರೂ, ನಾವು ಮತ್ತೆ ಫೋನ್‌ ಹಿಡಿದುಕೊಳ್ಳುತ್ತೇವೆ. ಸೋಶಿಯಲ್ ಮೀಡಿಯಾದಲ್ಲಿ ಇತರರ ಜೀವನ ನೋಡುತ್ತಾ, ನಮ್ಮದೇ ಜೀವನದ ಜೊತೆ ಸಂಪರ್ಕ ಕಡಿತವಾಗ್ತಾ ಹೋಗುತ್ತೆ. ನಿಧಾನವಾಗಿ ನಾವು ನಮ್ಮನ್ನೇ ಅರ್ಥಮಾಡಿಕೊಳ್ಳೋದು ಮರೆತು ಬಿಡುತ್ತೇವೆ.

ಇದನ್ನೂ ಓದಿ:

ನಮ್ಮ ಜೊತೆ ಮಾತನಾಡೋದು ಅಂದ್ರೆ ದೊಡ್ಡದಾದ ಏನನ್ನೂ ಮಾಡಬೇಕಿಲ್ಲ. ಕೆಲವೊಮ್ಮೆ ಮೌನವಾಗಿ ಕೂತು ದಿನ ಹೇಗಿತ್ತು ಅನ್ನೋದನ್ನ ಯೋಚಿಸೋದು, ಮನಸ್ಸಿಗೆ ಏನು ಬೇಕು ಅನ್ನೋದನ್ನ ಕೇಳೋದು, ತಪ್ಪು ಮಾಡಿದ್ರೆ ಒಪ್ಪಿಕೊಳ್ಳೋದು – ಇವೆಲ್ಲವೂ ಆ ಮಾತುಕತೆಗೇ ಸೇರುತ್ತವೆ. ಅದೇ ನಮ್ಮನ್ನು ಹಗುರ ಮಾಡೋ ಸಣ್ಣ ಚಿಕಿತ್ಸೆ.

ಜೀವನದಲ್ಲಿ ಎಲ್ಲರಿಗೂ ಸಮಯ ಕೊಡ್ತಾ ಕೊಡ್ತಾ, ನಮ್ಮಿಗೋಸ್ಕರ ಒಂದು ಕ್ಷಣವನ್ನೂ ಉಳಿಸದೇ ಹೋದ್ರೆ, ಒಂದು ದಿನ ನಾವು ನಮ್ಮನ್ನೇ ಪರಿಚಯವಿಲ್ಲದವರಂತೆ ಅನುಭವಿಸೋ ಸಾಧ್ಯತೆ ಇದೆ. ಅದಕ್ಕಾಗಿ ಕೆಲವೇ ನಿಮಿಷಗಳಾದರೂ, ನಮ್ಮ ಜೊತೆ ನಾವು ಮಾತನಾಡೋ ಅಭ್ಯಾಸ ಮಾಡಿಕೊಳ್ಳಬೇಕು. ಅದರಲ್ಲಿ ಸಿಗೋ ಶಾಂತಿ, ಹೊರಗಿನ ಯಾವ ಶಬ್ದದಲ್ಲೂ ಸಿಗೋದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !