September 27, 2026
Sunday, September 27, 2026
spot_img

ಕಳೆದು ಒಂದೂವರೆ ತಿಂಗಳು ಸ್ಮೃತಿ ನೋವು ತಿಂದಿದ್ದಾರೆ, ಈ ಗೆಲುವು ಅವರದ್ದೇ ಎಂದ ಶ್ರೇಯಾಂಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗುರುವಾರ ರಾತ್ರಿ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್ ಫೈನಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವುಮೆನ್ಸ್‌ ತಂಡ ಎರಡನೇ ಬಾರಿಗೆ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದೆ. ಈ ಗೆಲುವನ್ನು ಸ್ಮೃತಿ ಮಂಧಾನಾಗೆ ಡೆಡಿಕೇಟ್‌ ಮಾಡುತ್ತೇನೆ ಎಂದು ಶ್ರೇಯಾಂಕಾ ಪಾಟೀಲ್‌ ಹೇಳಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದ ಸ್ಮೃತಿ ತುಂಬಾ ನೋವು ತಿಂದಿದ್ದಾರೆ. ಹೀಗಾಗಿ ಈ ಗೆಲುವು ಅವರಿಗೆ ಬೇಕಾಗಿತ್ತು. ಅವರ ನಾಯಕತ್ವದಲ್ಲಿ ಗೆಲುವು ಸಾಧಿಸಿದ್ದೇವೆ. ಟೀಂ ಕಡೆಯಿಂದ ಈ ಗೆಲುವನ್ನು ಸ್ಮೃತಿಗೆ ಅರ್ಪಿಸುತ್ತೇನೆ ಎಂದಿದ್ದಾರೆ.

ಸ್ಮೃತಿ ಮಂಧಾನಾ ಮದುವೆ ನಡೆಯಬೇಕಿದ್ದು, ಕಡೆಯ ದಿನ ವಿವಾಹ ಕ್ಯಾನ್ಸಲ್‌ ಆಗಿತ್ತು. ಸ್ಮೃತಿ ತಂದೆಗೆ ಅನಾರೋಗ್ಯ, ಸ್ಮೃತಿ ಮದುವೆಯಾಗುವ ಹುಡುಗ ಚೀಟ್‌ ಮಾಡಿದ್ದಾರೆ. ಇದರಿಂದ ಮದುವೆ ಕ್ಯಾನ್ಸಲ್‌ ಆಯಿತು ಎನ್ನುವ ಮಾತುಗಳು ಕೇಳಿಬಂದಿತ್ತು.

ಬ್ರೇಕಪ್‌ನ್ನು ಮೋಟಿವೇಷನ್‌ ಆಗಿ ಸ್ಮೃತಿ ತೆಗೆದುಕೊಂಡಿದ್ದಾರೆ, ಫೈನಲಿ ಮೂವ್‌ ಆನ್‌ ಆಗಿದ್ದಾರೆ ಎನ್ನುವ ಫೋಟೊ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

Must Read