September 30, 2026
Wednesday, September 30, 2026
spot_img

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕಳ್ಳತನ? ದುಬೈಗೆ ಹೋಗ್ತಿದ್ದ ಮಹಿಳೆಯ ವಜ್ರಾಭರಣ ಗಾಯಬ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕಳ್ಳತನವಾಗಿದೆ. ದುಬೈಗೆ ಹೋಗ್ತಿದ್ದ ಮಹಿಳೆಯೊಬ್ಬರ ಚಿನ್ನ ಹಾಗೂ ವಜ್ರದ ಆಭರಣಗಳು ಕಳುವಾಗಿರುವ ಪ್ರಕರಣ ನಿಧಾನಕ್ಕೆ ಹೊರಬಂದಿದೆ.

ಬೆಂಗಳೂರಿನಿಂದ ದುಬೈಗೆ ಪ್ರಯಾಣಿಸುತ್ತಿದ್ದ ಹುಬ್ಬಳ್ಳಿ ಮೂಲದ ಮಹಿಳೆಯೊಬ್ಬರಿಗೆ ಈ ಕಹಿ ಅನುಭವವಾಗಿದೆ. ಅವರ ಬ್ಯಾಗ್‌ನಲ್ಲಿದ್ದ 790 ಗ್ರಾಂ ಚಿನ್ನ ಮತ್ತು ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ವಜ್ರ ಕಳುವಾಗಿದೆ ಎಂದು ತಿಳಿದುಬಂದಿದೆ.

ಹೊರಡುವಾಗ ಚಿನ್ನ ಇತ್ತು, ತಪಾಸಣೆ ಮಾಡುವಾಗ ಚಿನ್ನ ಇತ್ತು. ಚೆಕಿಂಗ್‌ ನಂತರವೇ ಟ್ಯಾಗ್‌ ಮಾಡಿದ್ದಾರೆ. ನಾನು ದುಬೈ ತಲುಪಿ ಬ್ಯಾಗ್‌ ತೆಗೆದು ನೋಡಿದರೆ ನನ್ನ ಚಿನ್ನಾಭರಣ ಹಾಗೂ ವಜ್ರಗಳು ಇಲ್ಲ ಎಂದು ಮಹಿಲೆ ಕಣ್ಣೀರಿಟ್ಟಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಕಳುವಾಗಿದೆ, ಇದರ ಹಿಂದೆ ಸಿಬ್ಬಂದಿಯ ಕೈವಾಡ ಇದೆ ಎಂದು ಸನಿಸುತ್ತಿದೆ ಎಂದು ಮಹಿಳೆ ದೂರಿದ್ದಾರೆ. ಸದ್ಯ ಕೆಂಪೇಗೌಡ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





Must Read