February 7, 2026
Saturday, February 7, 2026
spot_img

A+ ಗ್ರೇಡ್ ಔಟ್, 3 ಕೋಟಿಗೆ ರೋಹಿತ್-ವಿರಾಟ್ ಫಿಕ್ಸ್: BCCI ಹೊಸ ಒಪ್ಪಂದದ ರಹಸ್ಯವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2026ನೇ ಸಾಲಿನ ವಾರ್ಷಿಕ ಆಟಗಾರರ ಒಪ್ಪಂದಕ್ಕೆ ತಯಾರಿ ನಡೆಸುತ್ತಿದ್ದು, ಕ್ರಿಕೆಟ್ ಲೋಕದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಈ ಬಾರಿ ‘ಗ್ರೇಡ್’ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಾಗುತ್ತಿದ್ದು, ಇದು ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಸ್ಥಾನಮಾನದ ಮೇಲೆ ನೇರ ಪರಿಣಾಮ ಬೀರಲಿದೆ.

ಈ ಬಾರಿ ಬಿಸಿಸಿಐ ಪಟ್ಟಿಯಿಂದ ‘A+’ ಗ್ರೇಡ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ನಿರ್ಧರಿಸಿದೆ. ಕೇವಲ A, B ಮತ್ತು C ಎಂಬ ಮೂರು ವಿಭಾಗಗಳು ಮಾತ್ರ ಇರಲಿವೆ.

ಈ ಹಿಂದೆ ಉನ್ನತ ಮಟ್ಟದ (A+) ಗ್ರೇಡ್‌ನಲ್ಲಿದ್ದ ರೋಹಿತ್ ಮತ್ತು ವಿರಾಟ್ ಅವರನ್ನು ಈಗ ‘B’ ಗ್ರೇಡ್‌ಗೆ ಇಳಿಸಲಾಗಿದೆ.

ಗ್ರೇಡ್ ಬದಲಾವಣೆಯಿಂದಾಗಿ ಇಬ್ಬರು ದಿಗ್ಗಜರ ವಾರ್ಷಿಕ ಆದಾಯದಲ್ಲಿ ಭಾರಿ ಇಳಿಕೆಯಾಗಲಿದೆ. ಈ ಹಿಂದೆ 5 ಕೋಟಿ ರೂ. ಪಡೆಯುತ್ತಿದ್ದ ಇವರಿಗೆ, ಇನ್ನು ಮುಂದೆ ವಾರ್ಷಿಕ 3 ಕೋಟಿ ರೂ. ಸಂಭಾವನೆ ಮಾತ್ರ ಸಿಗಲಿದೆ.

ಈ ಬಾರಿಯ ‘A’ ಗ್ರೇಡ್ ಪಟ್ಟಿಯಲ್ಲಿ ಕೇವಲ ಮೂವರು ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ:

ಶುಭ್​​ಮನ್ ಗಿಲ್

ಜಸ್​ಪ್ರೀತ್ ಬುಮ್ರಾ

ರವೀಂದ್ರ ಜಡೇಜಾ

ಬಿಸಿಸಿಐನ ಈ ನಡೆ ರೋಹಿತ್ ಮತ್ತು ವಿರಾಟ್ ಅವರ ಯುಗಾಂತ್ಯದ ಸಂಕೇತ ಎನ್ನಲಾಗುತ್ತಿದೆ. 2027ರ ಏಕದಿನ ವಿಶ್ವಕಪ್ ನಂತರ ಈ ಇಬ್ಬರು ದಿಗ್ಗಜರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆ ದಟ್ಟವಾಗಿದ್ದು, ಅದಕ್ಕೆ ಪೂರಕವಾಗಿಯೇ ಈ ಆರ್ಥಿಕ ಮತ್ತು ಶ್ರೇಣಿಯ ಬದಲಾವಣೆಗಳನ್ನು ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !