June 22, 2026
Monday, June 22, 2026
spot_img

ಬಸ್‌ಗಳ ಮೇಲಿರುವ ತಂಬಾಕು ಜಾಹೀರಾತು ತೆಗೆಯೋಕೆ 15 ದಿನಗಳ ಗಡುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಇರುವ ತಂಬಾಕು ಜಾಹೀರಾತುಗಳನ್ನು ತೆಗೆಯಲು ಇನ್ನು 15 ದಿನ ಅಷ್ಟೇ ಬಾಕಿ ಇದೆ.

ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ತಂಬಾಕು ಜಾಹೀರಾತುಗಳು ಇದ್ದದ್ದು ಜನರಿಗೆ ಇಷ್ಟವಾಗಿಲ್ಲ. ಇದನ್ನು ತೆಗೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಜನಾಕ್ರೋಶಕ್ಕೆ ಮಣಿದ ಸರ್ಕಾರ ಇನ್ನು ಹದಿನೈದು ದಿನದೊಳಗೆ ಇದನ್ನು ತೆಗೆಯಬೇಕು ಎಂದು ಗಡುವು ನೀಡಿದೆ.

ರಾಜ್ಯದ 2 ಸಾವಿರ ಬಸ್‌ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತು ಪೋಸ್ಟರ್ ಅನ್ನು ಅಳವಡಿಕೆ ಮಾಡಿದ್ದಾರೆ. 15 ದಿನಗಳ ಒಳಗೆ ಎಲ್ಲಾ ಬಸ್‌ಗಳ ಮೇಲಿನ ಜಾಹೀರಾತು ತೆರವಿಗೆ ಸೂಚನೆ ನೀಡಲಾಗಿದೆ.

ಇನ್ನೂ ಜಾಹೀರಾತು ನೀಡಿದ ಕಂಪನಿಗಳ ಜೊತೆಯೂ ಮಾತನಾಡಿದ್ದು, ಜಾಹೀರಾತುಗಳ ತೆರವು ಮಾಡುವುದಕ್ಕೆ ಕಂಪನಿಗಳು ಒಪ್ಪಿಕೊಂಡಿವೆ. ಆಯಾ ಡಿಪೋಗಳಲ್ಲಿ ಡಿಪೋ ಮ್ಯಾನೆಜರ್‌ಗಳ ಜೊತೆ ಮಾತನಾಡಿದ್ದು, ತಕ್ಷಣಕ್ಕೆ ತೆರವು ಮಾಡುವಂತೆ ಸೂಚಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !