ಕೆಲಸದ ಒತ್ತಡದ ನಡುವೆ ದಿಢೀರನೆ ನೆನ್ನೆಯ ಊಟದ ಬಗ್ಗೆಯೋ ಅಥವಾ ಮುಂದಿನ ರಜೆಯ ಬಗ್ಗೆಯೋ ಆಲೋಚನೆ ಬರುತ್ತಿದೆಯೇ? ಹಾಗಿದ್ದರೆ ಗಾಬರಿ ಬೇಡ, ನಿಮ್ಮ ಮೆದುಳು ಸರಿಯಾಗಿಯೇ ಕೆಲಸ ಮಾಡುತ್ತಿದೆ!
ವಿಜ್ಞಾನದ ಪ್ರಕಾರ, ನಮ್ಮ ಮೆದುಳು ದಿನದ 47% ಸಮಯವನ್ನು ನಾವು ಮಾಡುತ್ತಿರುವ ಕೆಲಸದ ಹೊರತಾದ ಆಲೋಚನೆಗಳಲ್ಲೇ ಕಳೆಯುತ್ತದೆ. ನಾವು ಬೋರ್ ಹೊಡೆದಾಗ ಅಥವಾ ದಣಿದಾಗ, ನಮ್ಮ ಮೆದುಳು ‘ಆಟೋ ಪೈಲಟ್’ ಮೋಡ್‌ಗೆ ಹೋಗುತ್ತದೆ. ಇದು ಸೃಜನಶೀಲತೆಯನ್ನು ಹೆಚ್ಚಿಸಲು ಸಹಕಾರಿ ಎಂಬುದು ಒಂದೆಡೆಯಾದರೆ, ಕೆಲಸದ ವೇಗಕ್ಕೆ ಬ್ರೇಕ್ ಹಾಕುತ್ತದೆ ಎಂಬುದು ಇನ್ನೊಂದೆಡೆ. ಹಾಗಾಗಿ, ಆಗಾಗ ಸಣ್ಣ ವಿರಾಮ ತೆಗೆದುಕೊಳ್ಳುವುದು ಮತ್ತು ಮನಸ್ಸನ್ನು ಪ್ರಸ್ತುತ ಕ್ಷಣಕ್ಕೆ ತರುವುದು ಕೆಲಸದ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿ.
ಮೆದುಳು ಸತತವಾಗಿ ಒಂದೇ ಕೆಲಸದಲ್ಲಿ ತೊಡಗಿದಾಗ ಸುಸ್ತಾಗುತ್ತದೆ. ಆಗ ಅದು ತಾನಾಗಿಯೇ ‘ಡಿಫಾಲ್ಟ್ ಮೋಡ್ ನೆಟ್‌ವರ್ಕ್’ಗೆ ಜಾರುತ್ತದೆ, ಇದು ಹಗಲುಗನಸು ಕಾಣಲು ಪ್ರೇರೇಪಿಸುತ್ತದೆ.
ಮಾಡುತ್ತಿರುವ ಕೆಲಸ ಸವಾಲಾಗದಿದ್ದರೆ ಅಥವಾ ಬೋರಿಂಗ್ ಎನಿಸಿದರೆ ಮನಸ್ಸು ಹೆಚ್ಚು ಮಜಾ ನೀಡುವ ಆಲೋಚನೆಗಳತ್ತ ಮುಖ ಮಾಡುತ್ತದೆ.
ಇದನ್ನೂ ಓದಿ:
ಜೀವನದ ಇತರ ಸಮಸ್ಯೆಗಳು ಅಥವಾ ಬಾಕಿ ಇರುವ ಕೆಲಸಗಳ ಬಗ್ಗೆ ಆತಂಕವಿದ್ದರೆ, ಕೆಲಸದ ನಡುವೆ ಆ ಆಲೋಚನೆಗಳು ನುಸುಳುತ್ತವೆ.
ಮೊಬೈಲ್ ನೋಟಿಫಿಕೇಶನ್ ಅಥವಾ ಪಕ್ಕದವರ ಮಾತು ಕೂಡ ಏಕಾಗ್ರತೆಯನ್ನು ಕಿತ್ತುಕೊಳ್ಳುತ್ತವೆ.



