September 25, 2026
Friday, September 25, 2026
spot_img

ಎಲ್ಲಾ Trade Deal ಮಹಿಮೆ! ಭಾರತದಲ್ಲಿ ಹಾರ್ಲೆ-ಡೇವಿಡ್ಸನ್ ಬೈಕ್ ಬೆಲೆಯಲ್ಲಿ ಭಾರೀ ಇಳಿಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ–ಅಮೆರಿಕಾ ನಡುವಿನ ವ್ಯಾಪಾರ ಒಪ್ಪಂದದ ಪರಿಣಾಮವಾಗಿ ಅಮೆರಿಕದಿಂದ ಆಮದು ಆಗುವ ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್‌ಗಳ ಬೆಲೆ ಇನ್ನು ಮುಂದೆ ಕಡಿಮೆಯಾಗುವ ಸಾಧ್ಯತೆ ಇದೆ. ಹೆಚ್ಚಿನ ಎಂಜಿನ್ ಸಾಮರ್ಥ್ಯ ಹೊಂದಿರುವ ಬೈಕ್‌ಗಳ ಮೇಲೆ ಇದ್ದ ಹೆಚ್ಚಿನ ಆಮದು ಸುಂಕವನ್ನು ಕಡಿಮೆ ಮಾಡುವ ಕುರಿತಾಗಿ ಚರ್ಚೆಗಳು ನಡೆದಿದ್ದು, ಇದರ ಫಲವಾಗಿ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

ಈವರೆಗೆ 800 ಸಿಸಿ ಮೇಲ್ಪಟ್ಟ ಬೈಕ್‌ಗಳ ಮೇಲೆ ಸುಮಾರು 44 ಶೇಕಡಾ ಆಮದು ಸುಂಕ ವಿಧಿಸಲಾಗುತ್ತಿತ್ತು. ಇದರಿಂದಾಗಿ ಒಂದು ಬೈಕ್‌ ಮೇಲೆ ಲಕ್ಷಾಂತರ ರೂಪಾಯಿ ಹೆಚ್ಚುವರಿ ವೆಚ್ಚ ಸೇರಿ ಬೆಲೆ ಗಗನಕ್ಕೇರುತ್ತಿತ್ತು. ಇದೀಗ ಸುಂಕದಲ್ಲಿ ಸಡಿಲಿಕೆ ನೀಡಿದರೆ, ಆಮದು ಮಾಡಿಕೊಳ್ಳುವ ಬೈಕ್‌ಗಳ ಬೆಲೆ ಗಮನಾರ್ಹವಾಗಿ ಇಳಿಯಬಹುದು.

ಇದನ್ನೂ ಓದಿ:

ಈ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ 800 ರಿಂದ 1600 ಸಿಸಿ ಸಾಮರ್ಥ್ಯದ ಸಂಪೂರ್ಣ ಆಮದುಗೊಂಡ ಸುಮಾರು 187 ಹಾರ್ಲೆ-ಡೇವಿಡ್ಸನ್ ಬೈಕ್‌ಗಳು ಭಾರತದಲ್ಲಿ ಮಾರಾಟವಾಗಿವೆ. ಇನ್ನು 440 ಸಿಸಿ ಸಾಮರ್ಥ್ಯದ HD X440 ಮಾದರಿಗಳನ್ನು ಹೀರೋ ಮೋಟೋಕಾರ್ಪ್ ಭಾರತದಲ್ಲೇ ಉತ್ಪಾದಿಸುತ್ತಿರುವುದರಿಂದ ಅವುಗಳು ಈಗಾಗಲೇ ಕಡಿಮೆ ಬೆಲೆಯಲ್ಲಿ ಲಭ್ಯವಿವೆ.

ಹೆಚ್ಚಿನ ಸುಂಕದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದಿನಿಂದಲೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಈ ಹೊಸ ಒಪ್ಪಂದದಿಂದ ಪರಿಸ್ಥಿತಿ ಬದಲಾಗುವ ನಿರೀಕ್ಷೆ ವ್ಯಕ್ತವಾಗಿದೆ.

Must Read