September 25, 2026
Friday, September 25, 2026
spot_img

ರಾಷ್ಟ್ರ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಹೊಸ ಸಿನಿಮಾ ಪೂಜೆ ಮುಗಿಸಿದ ನಟ ಧನುಷ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮ್ಮ ವೈವಿಧ್ಯಮಯ ನಟನೆಯ ಮೂಲಕ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ತಮಿಳಿನ ಸ್ಟಾರ್ ನಟ ಧನುಷ್, ತಮ್ಮ ಮುಂಬರುವ ಬಹುನಿರೀಕ್ಷಿತ ಸಿನಿಮಾದ ಯಶಸ್ಸಿಗಾಗಿ ದೇವರ ಆಶೀರ್ವಾದ ಪಡೆದಿದ್ದಾರೆ. ಶುಕ್ರವಾರ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಇಳಯಂಗುಡಿ ಸಮೀಪದ ಮಾರ್ನಾಡು ಗ್ರಾಮದಲ್ಲಿರುವ ಪ್ರಸಿದ್ಧ ಮಾರ್ನಾಡು ಕರುಪ್ಪಣಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಹಾಗೂ ವಿಶೇಷ ಪೂಜಾ ಸಮಾರಂಭ ನೆರವೇರಿದೆ.

ಕಾಮಿಡಿ ಕಿಂಗ್ ವಡಿವೇಲು ಮತ್ತು ಧನುಷ್ ಜುಗಲ್‌ಬಂದಿ

ಅತ್ಯಂತ ಸರಳವಾಗಿ ಜರುಗಿದ ಈ ಪೂಜಾ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ನಟ ಧನುಷ್ ಜೊತೆಗೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ವಿಶೇಷವೆಂದರೆ, ಈ ಚಿತ್ರದಲ್ಲಿ ತಮಿಳು ಚಿತ್ರರಂಗದ ಖ್ಯಾತ ಹಿರಿಯ ಹಾಸ್ಯನಟ ವಡಿವೇಲು ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮುಹೂರ್ತದ ವೇಳೆ ಧನುಷ್ ಅವರಿಗೆ ಸಾಥ್ ನೀಡಿದ್ದಾರೆ. ಈ ಹೊಸ ಚಿತ್ರವನ್ನು ಇತ್ತೀಚೆಗೆ ಸೂಪರ್ ಹಿಟ್ ‘ಲಬ್ಬರ್ ಪಂದು’ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಯುವ ಪ್ರತಿಭೆ ತಮಿಳರಸನ್ ಪಚ್ಚಮುತ್ತು ಅವರು ನಿರ್ದೇಶಿಸುತ್ತಿದ್ದಾರೆ.

ರಾಷ್ಟ್ರ ಪ್ರಶಸ್ತಿಯ ಡಬಲ್ ಧಮಾಕಾ

ಕಳೆದ ಮಂಗಳವಾರವಷ್ಟೇ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾವೇಶದಲ್ಲಿ ಧನುಷ್ ಅವರಿಗೆ ಅತ್ಯುನ್ನತ ಗೌರವ ಒಲಿದಿತ್ತು. ದೆಹಲಿಯ ಹೊರಗೆ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಧನುಷ್ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಸ್ವೀಕರಿಸಿದ್ದರು.

ಅವರು ಸ್ವತಃ ನಿರ್ದೇಶಿಸಿ, ನಟಿಸಿದ್ದ ‘ರಾಯನ್’ ಚಿತ್ರಕ್ಕೆ ‘ಅತ್ಯುತ್ತಮ ತಮಿಳು ಚಿತ್ರ’ ಎಂಬ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಒಬ್ಬ ನಿರ್ದೇಶಕನಾಗಿ ಧನುಷ್ ಮುಡಿಗೆ ಸೇರಿದ ಚೊಚ್ಚಲ ರಾಷ್ಟ್ರ ಪ್ರಶಸ್ತಿ ಇದಾಗಿದೆ ಎಂಬುದು ಅವರ ಸಿನಿಮಾ ಪಯಣದ ಹೆಮ್ಮೆಯ ಮೈಲಿಗಲ್ಲು.

ಇದನ್ನೂ ಓದಿ:

ಪ್ರಸ್ತುತ ಧನುಷ್ ಅವರು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಭಾರೀ ನಿರೀಕ್ಷೆಯ ‘OM: Chapter 1’ ಚಿತ್ರದ ಶೂಟಿಂಗ್‌ನಲ್ಲೂ ಬ್ಯುಸಿಯಾಗಿದ್ದು, ಅದರ ಬೆನ್ನಲ್ಲೇ ಈ ಹೊಸ ಚಿತ್ರಕ್ಕೂ ಚಾಲನೆ ನೀಡಿರುವುದು ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟು ಮಾಡಿದೆ.

Must Read