ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ಈಗ ತಮ್ಮ ಸಿನಿಮಾಗಳ ಬಿಡುಗಡೆ ಬಗ್ಗೆ ಹೆಚ್ಚು ಜಾಗರೂಕತೆ ತೋರಿಸುತ್ತಿದ್ದಾರೆ. ಹಿಂದಿನಂತೆ ಅವರ ಚಿತ್ರಗಳಿಗೆ ಭಾರೀ ಕ್ರೇಜ್ ಇದ್ದರೂ, ಇತ್ತೀಚಿನ ವರ್ಷಗಳಲ್ಲಿ ಕೆಲವು ಸಿನಿಮಾಗಳು ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆ ನಿರ್ಮಾಪಕರು ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.
ಸಲ್ಮಾನ್ ಅಭಿನಯದ ‘ಬ್ಯಾಟಲ್ ಆಫ್ ಗಲ್ವಾನ್’ ಚಿತ್ರವನ್ನು ಮೊದಲಿಗೆ ಏಪ್ರಿಲ್ 17ರಂದು ಬಿಡುಗಡೆ ಮಾಡುವ ಯೋಚನೆ ಇತ್ತು. ಆದರೆ ಅದೇ ಸಮಯದಲ್ಲಿ ಹಲವು ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಯಾಗುತ್ತಿರುವುದರಿಂದ ಚಿತ್ರ ‘ಸ್ಯಾಂಡ್‌ವಿಚ್’ ಆಗುವ ಭಯ ತಂಡದಲ್ಲಿ ಕಾಣಿಸಿಕೊಂಡಿದೆ. ಜೊತೆಗೆ ಚಿತ್ರದ ಕೆಲವು ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ ಎಂಬ ಕಾರಣವೂ ಇದೆ.
ಇದನ್ನೂ ಓದಿ:
ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಹಲವು ಭಾಷೆಗಳ ದೊಡ್ಡ ಚಿತ್ರಗಳು ತೆರೆಗೆ ಬರುತ್ತಿರುವ ಹಿನ್ನೆಲೆ, ಚಿತ್ರಕ್ಕೆ ಸರಿಯಾದ ಸಮಯ ಹುಡುಕಲು ತಂಡ ಮುಂದಾಗಿದೆ. ಮೇ ತಿಂಗಳಲ್ಲಿ ಐಪಿಎಲ್ ಹಂಗಾಮೆ, ನಂತರ ಮಳೆಗಾಲ ಇರುವುದರಿಂದ ಕೊನೆಗೆ ಆಗಸ್ಟ್ 15ನ್ನು ಆಯ್ಕೆ ಮಾಡಲಾಗಿದೆ.
ದೇಶಭಕ್ತಿ ಕಥೆಯನ್ನು ಆಧರಿಸಿದ ಈ ಸಿನಿಮಾ ಗಲ್ವಾನ್ ಗಡಿಯ ಘಟನೆಗಳ ಹಿನ್ನೆಲೆಯಲ್ಲಿದೆ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಬಿಡುಗಡೆ ಮಾಡಿದರೆ ಪ್ರೇಕ್ಷಕರಿಗೆ ಹೆಚ್ಚು ಸಂಪರ್ಕ ಸಾಧಿಸಲಿದೆ ಎಂಬ ನಿರೀಕ್ಷೆಯಿದೆ.



