February 9, 2026
Monday, February 9, 2026
spot_img

ಕರೂರು ಸಂತ್ರಸ್ತರ ಕಣ್ಣೀರು ಮರೆತರೆ ದಳಪತಿ? ಮದುವೆ ಸಂಭ್ರಮದ ಫೋಟೋ ನೋಡಿ ಕೆರಳಿದ ಜನತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ ದಳಪತಿ ವಿಜಯ್ ಅವರು ಸದ್ಯ ಸಿನಿಮಾಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಸುದ್ದಿಯಲ್ಲಿದ್ದಾರೆ. ಒಂದು ಕಡೆ ಅವರ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಬಿಡುಗಡೆಯ ಬಗ್ಗೆ ಅನಿಶ್ಚಿತತೆ ಮುಂದುವರಿದಿದ್ದರೆ, ಇನ್ನೊಂದು ಕಡೆ ನಟನ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಅದ್ಧೂರಿ ಮದುವೆಯೊಂದರಲ್ಲಿ ವಿಜಯ್ ಭಾಗವಹಿಸಿದ್ದರು. ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಸೇರಿದಂತೆ ದೇಶದ ಪ್ರಮುಖ ಗಣ್ಯರು ಈ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಆದರೆ, ಈ ಸಂಭ್ರಮದ ಭೇಟಿಯೇ ಈಗ ವಿಜಯ್ ಅವರ ವಿರುದ್ಧ ಟೀಕಾಸ್ತ್ರವಾಗಿ ಬಳಕೆಯಾಗುತ್ತಿದೆ.

ಕಳೆದ ವರ್ಷ ಕರೂರಿನಲ್ಲಿ ವಿಜಯ್ ನಡೆಸಿದ್ದ ರಾಜಕೀಯ ರ್ಯಾಲಿಯ ಸಂದರ್ಭದಲ್ಲಿ ನಡೆದ ಭೀಕರ ಕಾಲ್ತುಳಿತದಲ್ಲಿ ಸುಮಾರು 41 ಜನರು ಪ್ರಾಣ ಕಳೆದುಕೊಂಡಿದ್ದರು. ಈ ದುರಂತದ ಹೊಣೆಯನ್ನು ವಿಜಯ್ ಅವರೇ ಹೊರಬೇಕು ಎಂಬ ಆರೋಪಗಳಿದ್ದು, ಪ್ರಸ್ತುತ ಅವರು ಈ ಬಗ್ಗೆ ವಿಚಾರಣೆಯನ್ನೂ ಎದುರಿಸುತ್ತಿದ್ದಾರೆ. ಸಾರ್ವಜನಿಕರ ಆಕ್ರೋಶಕ್ಕೆ ಮುಖ್ಯ ಕಾರಣಗಳೆಂದರೆ:

“ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ವಿಜಯ್‌ಗೆ ಸಮಯವಿಲ್ಲ, ಆದರೆ ಅದ್ಧೂರಿ ಮದುವೆಗಳಲ್ಲಿ ಮಿಂಚಲು ಅವರಿಗೆ ಪುರಸೊತ್ತಿದೆ” ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

ಜನರಿಗಾಗಿ ರಾಜಕೀಯಕ್ಕೆ ಬಂದವರು ಜನರ ಕಷ್ಟಕ್ಕಿಂತ ಹಿತೈಷಿಗಳ ಸಂಭ್ರಮಕ್ಕೆ ಆದ್ಯತೆ ನೀಡುತ್ತಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ:

ವಿಜಯ್ ನಟನೆಯ, ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ನಿರ್ಮಿಸಿರುವ ‘ಜನ ನಾಯಗನ್’ ಚಿತ್ರದ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಚಿತ್ರದಲ್ಲಿರುವ ಪ್ರಖರ ರಾಜಕೀಯ ವಿಷಯಗಳೇ ಸೆನ್ಸಾರ್ ಅಥವಾ ಬಿಡುಗಡೆ ವಿಳಂಬಕ್ಕೆ ಕಾರಣ ಎಂಬ ಗುಸುಗುಸು ಗಾಂಧಿನಗರ ಹಾಗೂ ಕೋಲಿವುಡ್‌ನಲ್ಲಿ ಕೇಳಿಬರುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !