February 9, 2026
Monday, February 9, 2026
spot_img

ಡಿಜಿಟಲ್ ಅಲರ್ಟ್: ನಿಮ್ಮ ಮಕ್ಕಳಿಗೆ ಫೋನ್ ಕೊಡಿಸುವ ಮುನ್ನ ಪೋಷಕರು ಈ ಸುದ್ದಿ ಓದಲೇಬೇಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿದ್ಯಾಭ್ಯಾಸಕ್ಕಾಗಿ ಪೋಷಕರು ಪ್ರೀತಿಯಿಂದ ಕೊಡಿಸಿದ ಮೊಬೈಲ್ ಫೋನನ್ನು ದುರುಪಯೋಗಪಡಿಸಿಕೊಂಡ ಯುವತಿಯೊಬ್ಬಳು, ತನ್ನ ಸ್ವಂತ ಕುಟುಂಬದ ಸದಸ್ಯರ ಖಾಸಗಿ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಪ್ರಿಯಕರನಿಗೆ ಕಳುಹಿಸಿರುವ ಆಘಾತಕಾರಿ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಬೆಳಕಿಗೆ ಬಂದಿದೆ.

ಬ್ಯಾಟರಾಯನಪುರ ವ್ಯಾಪ್ತಿಯ ನಿವಾಸಿಯಾದ ಯುವತಿಯೊಬ್ಬಳು ಕಾಲೇಜು ಓದಿಗೆ ಮೊಬೈಲ್ ಬೇಕೆಂದು ಪಟ್ಟು ಹಿಡಿದು ಪೋಷಕರಿಂದ ಫೋನ್ ಪಡೆದುಕೊಂಡಿದ್ದಳು. ಆದರೆ, ಓದಿನತ್ತ ಗಮನ ಹರಿಸುವ ಬದಲು ವರುಣ್ ಅಲಿಯಾಸ್ ಗಿರಿಧರ್ ಎಂಬ ಯುವಕನೊಂದಿಗೆ ಪ್ರೇಮಪಾಶಕ್ಕೆ ಬಿದ್ದಿದ್ದಳು. ಈಕೆ ಅಪರಿಚಿತನೊಂದಿಗೆ ನಿರಂತರವಾಗಿ ಮಾತನಾಡುತ್ತಿರುವುದನ್ನು ಗಮನಿಸಿದ ತಾಯಿ, ತಂದೆಗೆ ವಿಷಯ ತಿಳಿಸಿದ್ದಾರೆ. ಅನುಮಾನಗೊಂಡ ಪೋಷಕರು ಮಗಳ ಮೊಬೈಲ್ ಪರಿಶೀಲಿಸಿದಾಗ ಅವರ ಕಾಲ ಕೆಳಗಿನ ಭೂಮಿ ಕುಸಿದಂತಾಗಿದೆ.

ಆರೋಪಿ ಯುವತಿಯು ತನ್ನ ತಾಯಿ ಮಲಗಿದ್ದ ಸಮಯದಲ್ಲಿ ಅವರ ಖಾಸಗಿ ಫೋಟೋಗಳನ್ನು ರಹಸ್ಯವಾಗಿ ತೆಗೆದಿದ್ದಾಳೆ. ಅಷ್ಟಕ್ಕೇ ನಿಲ್ಲದ ಈಕೆ, ತನ್ನ ದೊಡ್ಡಮ್ಮ ಸ್ನಾನ ಮಾಡುತ್ತಿದ್ದಾಗ ಅವರಿಗೆ ತಿಳಿಯದಂತೆ ನಗ್ನ ಫೋಟೋಗಳನ್ನು ಸೆರೆಹಿಡಿದು ತನ್ನ ಪ್ರಿಯಕರನಿಗೆ ವಾಟ್ಸಾಪ್ ಮೂಲಕ ರವಾನಿಸಿದ್ದಾಳೆ. ಕುಟುಂಬದ ಮಾನವನ್ನು ಬೀದಿಗೆ ತರುವ ಈ ಕೃತ್ಯ ಕಂಡು ಪೋಷಕರು ದಿಗ್ಭ್ರಮೆಗೊಂಡಿದ್ದಾರೆ.

ಇದನ್ನೂ ಓದಿ:

ಸದ್ಯಕ್ಕೆ ಮಗಳ ಮೊಬೈಲ್‌ನಲ್ಲಿದ್ದ ಫೋಟೋಗಳನ್ನು ಪೋಷಕರು ಡಿಲೀಟ್ ಮಾಡಿದ್ದರೂ, ಪ್ರಿಯಕರನ ಬಳಿ ಇರುವ ಫೋಟೋಗಳು ಭವಿಷ್ಯದಲ್ಲಿ ದುರುಪಯೋಗವಾಗಬಹುದು ಎಂಬ ಭೀತಿಯಿಂದ ತಾಯಿ ಪೊಲೀಸರ ಮೊರೆ ಹೋಗಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಯುವತಿ ಮತ್ತು ಆಕೆಯ ಪ್ರಿಯಕರ ಗಿರಿಧರ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !