ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮೆಟ್ರೋ ನಿಲ್ದಾಣದಲ್ಲಿ ನಡೆದ ಅಚ್ಚರಿಯ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮೆಟ್ರೋ ನಿಲ್ದಾಣದಲ್ಲಿ ಯುವಕ ತನ್ನ ಗೆಳತಿಯೊಂದಿಗೆ ಕುಳಿತಿರುವುದನ್ನು ಕಂಡ ತಾಯಿ, ಅಲ್ಲಿ ತಕ್ಷಣವೇ ಅವರ ನಿಶ್ಚಿತಾರ್ಥ ಮಾಡಿಸಿದ ಘಟನೆ ನಡೆದಿದೆ.
ವಿಡಿಯೋದಲ್ಲಿ ತಾಯಿ ಮೊದಲು ಮಗನೊಂದಿಗೆ ಕೆಲ ಕ್ಷಣ ಗದರಿಸುತ್ತಿರುವುದು ಕಾಣಿಸುತ್ತದೆ. ನಂತರ ತನ್ನ ಬಳಿ ತಂದಿದ್ದ ಹೂವು, ಹಣ್ಣು ಮತ್ತು ಸಿಹಿಯನ್ನು ಯುವತಿಗೆ ನೀಡಿ, ಸ್ಥಳದಲ್ಲೇ ನಿಶ್ಚಿತಾರ್ಥದ ರೀತಿಯಲ್ಲಿ ಆಚರಣೆ ನಡೆಸಿದ್ದಾರೆ. ಈ ವೇಳೆ ಯುವಕ ಅಚ್ಚರಿಯಿಂದ ಪ್ರತಿಕ್ರಿಯಿಸುತ್ತಿದ್ದರೆ, ಅಲ್ಲಿದ್ದವರು ಫೋಟೋ ಮತ್ತು ವಿಡಿಯೋ ತೆಗೆಯುವಂತೆ ಮಹಿಳೆ ಕೇಳಿರುವುದು ಕೂಡ ಕಂಡು ಬಂದಿದೆ. ಬಳಿಕ ಯುವ ಜೋಡಿ ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ಇದನ್ನೂ ಓದಿ:
ಈ ಘಟನೆ ಯಾವ ದಿನ ನಡೆದಿದೆ ಎಂಬುದು ಸ್ಪಷ್ಟವಾಗದಿದ್ದರೂ, ದೆಹಲಿ ಮೆಟ್ರೋದಲ್ಲೇ ನಡೆದದ್ದು ಎಂದು ಹೇಳಲಾಗುತ್ತಿದೆ. ಘಟನೆ ವೈರಲ್ ಆದ ಬೆನ್ನಲ್ಲೇ ಮೆಟ್ರೋ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಕಾಪಾಡುವಂತೆ ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ.



