April 9, 2026
Thursday, April 9, 2026
spot_img

ಅನಿಲ್ ಕಪೂರ್ ಮನೆಯಲ್ಲಿ ಮತ್ತೆ ಕಿಲಕಿಲ ಸದ್ದು: 2ನೇ ಮಗುವಿನ ನಿರೀಕ್ಷೆಯಲ್ಲಿ ‘ಬಾಲಿವುಡ್ ಸುಂದರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ‘ಫ್ಯಾಷನ್ ಐಕಾನ್’ ಎಂದೇ ಗುರುತಿಸಿಕೊಂಡಿರುವ ನಟಿ ಸೋನಂ ಕಪೂರ್ ಈಗ ತಮ್ಮ ವೈಯಕ್ತಿಕ ಜೀವನದ ಅತ್ಯಂತ ಖುಷಿಯ ಕ್ಷಣಗಳಲ್ಲಿದ್ದಾರೆ. ಹಿರಿಯ ನಟ ಅನಿಲ್ ಕಪೂರ್ ಪುತ್ರಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸೋನಂ, ನಟನೆಯಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಯಶಸ್ಸು ಕಾಣದಿದ್ದರೂ, ಈಗ ಸಂಸಾರ ನೌಕೆಯಲ್ಲಿ ಬಹಳ ಸುಖವಾಗಿದ್ದಾರೆ.

2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಮದುವೆಯಾದ ಸೋನಂ, 2022ರಲ್ಲಿ ಮೊದಲ ಗಂಡು ಮಗುವಿಗೆ (ವಾಯು) ಜನ್ಮ ನೀಡಿದ್ದರು. ಇದೀಗ 40ನೇ ವಯಸ್ಸಿನಲ್ಲಿ ಅವರು ಎರಡನೇ ಬಾರಿಗೆ ತಾಯಿಯಾಗುತ್ತಿದ್ದು, ಇತ್ತೀಚೆಗಷ್ಟೇ ಅವರ ಸೀಮಂತ ಶಾಸ್ತ್ರವು ಕುಟುಂಬಸ್ಥರ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ ನೆರವೇರಿದೆ.

ಇದನ್ನೂ ಓದಿ:

ಸಿನಿಮಾಗಳಿಂದ ತುಸು ದೂರವಿದ್ದರೂ ಸೋನಂ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಸುಂದರ ಫೋಟೋಗಳು ಹಾಗೂ ಜೀವನದ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುವ ಅವರಿಗೆ ಅಭಿಮಾನಿಗಳು ಶುಭಾಶಯಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !