September 27, 2026
Sunday, September 27, 2026
spot_img

ಒಂದು ಪಂದ್ಯದಲ್ಲಿ Hero, ಇನ್ನೊಂದರಲ್ಲಿ Zero: ಟೀಮ್ ಇಂಡಿಯಾ ಯುವ ಓಪನರ್‌ನ ವಿಚಿತ್ರ ದಾಖಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಕ್ರೀಸ್‌ನಲ್ಲಿದ್ದರೆ ರನ್ ಮಳೆ ಗ್ಯಾರಂಟಿ, ಆದರೆ ಅವರು ಕ್ರೀಸ್‌ನಲ್ಲಿ ಎಷ್ಟು ಹೊತ್ತು ಇರುತ್ತಾರೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಟಿ20 ಕ್ರಿಕೆಟ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳ ನಿದ್ದೆಗೆಡಿಸಿರುವ ಅಭಿಷೇಕ್, ಸದ್ಯ ‘ಆಲ್ ಅಥವಾ ನಥಿಂಗ್’ ಎಂಬ ವಿಚಿತ್ರ ಫಾರ್ಮ್‌ನಲ್ಲಿದ್ದಾರೆ.

ಅಭಿಷೇಕ್ ಅವರ ಕಳೆದ ಆರು ಇನಿಂಗ್ಸ್‌ಗಳನ್ನು ಗಮನಿಸಿದರೆ, ಅವರ ಸ್ಥಿರತೆಯ ಕೊರತೆ ಎದ್ದು ಕಾಣುತ್ತಿದೆ. ಅವರು ಔಟ್ ಆಫ್ ಫಾರ್ಮ್‌ನಲ್ಲಿಲ್ಲ, ಆದರೆ ಅವರ ಬ್ಯಾಟಿಂಗ್ ಗ್ರಾಫ್ ಏರಿಳಿತದ ಪರಾಕಾಷ್ಠೆಯಲ್ಲಿದೆ.

ಕಳೆದ ಆರು ಪಂದ್ಯಗಳಲ್ಲಿ ಅಭಿಷೇಕ್ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಅಚ್ಚರಿಯ ವಿಷಯವೆಂದರೆ, ಒಂದು ಪಂದ್ಯದಲ್ಲಿ ಅಬ್ಬರಿಸಿದ ನಂತರದ ಪಂದ್ಯದಲ್ಲೇ ಅವರು ಸೊನ್ನೆ ಸುತ್ತಿರುವ ಪ್ಯಾಟರ್ನ್ ಮುಂದುವರಿಯುತ್ತಿದೆ. ಟಿ20 ವಿಶ್ವಕಪ್‌ನಂತಹ ದೊಡ್ಡ ವೇದಿಕೆಯಲ್ಲಿ, ಮೊದಲ ಪಂದ್ಯದಲ್ಲೇ ಯುಎಸ್​ಎ ವಿರುದ್ಧ ಶೂನ್ಯಕ್ಕೆ ಔಟಾಗಿರುವುದು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ತಲೆನೋವು ತಂದಿದೆ.

ಅಭಿಷೇಕ್ ಅವರ ಅಬ್ಬರದ ಆಟ ತಂಡಕ್ಕೆ ಬೇಕಿದ್ದರೂ, ನಿರ್ಣಾಯಕ ಪಂದ್ಯಗಳಲ್ಲಿ ಈ ‘ಡಕ್ ಔಟ್’ ಸಂಪ್ರದಾಯ ಮುಂದುವರಿದರೆ ತಂಡಕ್ಕೆ ಅಪಾಯ ಕಾದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Must Read