ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಿನ ಕಾಲದಲ್ಲಿ ಮಕ್ಕಳಾದರೆ ಸಾಕು ಎಂದು ಎಷ್ಟೋ ಪೋಷಕರು ಕೋಟಿ ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ತನಗೆ ಹೆಣ್ಣು ಮಕ್ಕಳಿದ್ದರೂ ಗಂಡು ಮಗು ಬೇಕೆಂದು ಕಿಡ್ನಾಪ್ ಮಾಡಿದ್ದಾಳೆ.
ತುಮಕೂರಿನ ಜಾತ್ರೆಯಲ್ಲಿ ಎರಡೂವರೆ ವರ್ಷದ ಮಗುವಿಗೆ ಚಾಕೋಲೆಟ್ ಆಸೆ ತೋರಿಸಿ ಕಿಡ್ನ್ಯಾಪ್ ಮಾಡಲಾಗಿದೆ.
ಕದ್ದ ಮಗುವನ್ನು ಬೆಂಗಳೂರಿನ ಕೋರಮಂಗಲದಲ್ಲಿ ಪತ್ತೆ ಮಾಡಿದ್ದು, ಪೋಷಕರಿಗೆ ಹಸ್ತಾಂತರಿಸಲಾಗಿದೆ. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮಾಗೋಡು ಗ್ರಾಮದಲ್ಲಿ ನಡೆದ ಶ್ರೀರಂಗ ಜಾತ್ರೆ ವೇಳೆ ಅಪಹರಣಗೊಂಡಿದ್ದ ಎರಡುವರೆ ವರ್ಷದ ಗಂಡು ಮಗುವನ್ನು ಶಿರಾ ಪೊಲೀಸರು ಸಿನಿಮೀಯ ರೀತಿಯಲ್ಲಿ ಪತ್ತೆ ಹಚ್ಚಿ ರಕ್ಷಿಸಿದ್ದಾರೆ.
ಬೆಂಗಳೂರಿನ ಲಗ್ಗೆರೆಯಲ್ಲಿ ವಾಸಿಸುತ್ತಿದ್ದ ದಂಪತಿಗೆ ಎರಡು ಹೆಣ್ಣು ಮಕ್ಕಳಿದ್ದಾರೆ. ಆದರೂ ಗಂಡು ಬೇಕೆಂಬ ಆಸೆಗೆ ಈ ಕೆಲಸ ಮಾಡಿದ್ದಾರೆ. ತನ್ನ ತಾತನ ಜೊತೆ ಜಾತ್ರೆ ನೋಡಲು ಬಂದಿದ್ದ ಮಗುವನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಪೊಲೀಸರು ಸಿಸಿಟಿವಿ ಹಾಗೂ ಇನ್ನಿತರ ಸುಳಿವುಗಳಿಂದ ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ನೀಡಿದ್ದಾರೆ.
ಕಿಡ್ನ್ಯಾಪ್ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.



