September 30, 2026
Wednesday, September 30, 2026
spot_img

ಶಾಲೆ ಗೀಲೆ ಎಲ್ಲ ಬೇಡ ಎಂದು ಪುಸ್ತಕ ಸುಟ್ಟ ತಂದೆ ವಿರುದ್ಧ ದೂರು ಕೊಟ್ಟ ಮಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಾಲೆಗೆ ಹೋಗೋದು ಬೇಡ ಎಂದು ಪುಸ್ತಕವನ್ನೆಲ್ಲ ಸುಟ್ಟು ಹಾಕಿದ ತಂದೆ ಮೇಲೆ ಮಗಳೇ ದೂರು ನೀಡಿದ್ದಾಳೆ.

ನ್ಯಾಮತಿ ಪೊಲೀಸ್‌ ಠಾಣಾ ವ್ಯಾಪ್ತಿಯ ಆರುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 10ನೇ ತರಗತಿ ಓದುತ್ತಿದ್ದ ಮಗಳಿಗೆ ಶಾಲೆಗೆ ಹೋಗಬೇಡ ಎಂದು ತಂದೆ ಗದರಿದ್ದಾರೆ. ನಂತರ ಮಗಳ ಬ್ಯಾಗ್‌ನಲ್ಲಿದ್ದ ಎಲ್ಲ ಪುಸ್ತಕಗಳನ್ನು ಸುಟ್ಟು ಹಾಕಿದ್ದಾರೆ.

ಶಾಲೆಗೆ ಹೋಗಲೇಬೇಕು ಎಂದು ಪಟ್ಟು ಹಿಡಿದ ಮಗಳು ಸೀದ 112ಕ್ಕೆ ಕರೆ ಮಾಡಿ ತನ್ನ ತಂದೆ ಕುಡಿದು ಬಂದು ನನ್ನ ವಿದ್ಯಾಭ್ಯಾಸಕ್ಕೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದ್ದಾಳೆ.

ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ತಂದೆಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿನಿಗೆ ಹೊಸ ಪುಸ್ತಕ ಹಾಗೂ ಬ್ಯಾಗ್‌ ಕೊಡಿಸಿ ಓದಲು ತಿಳಿಸಿದ್ದಾರೆ. ಈ ಬಗ್ಗೆ ಶಿಕ್ಷಕರಿಗೂ ಮಾಹಿತಿ ನೀಡಿದ್ದು, ಆಕೆಯ ಬಗ್ಗೆ ಹೆಚ್ಚಿನ ಗಮನ ವಹಿಸುವಂತೆ ಮನವಿ ಮಾಡಿದ್ದಾರೆ.

ಪೊಲೀಸರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ವಿದ್ಯಾರ್ಥಿನಿಗೆ ವಿದ್ಯೆಯ ಬಗ್ಗೆ ಇರುವ ಆಸಕ್ತಿ ನೋಡಿ ಜನ ಮೆಚ್ಚುಗೆ ಮಾತನಾಡಿದ್ದಾರೆ.

Must Read