ಹೊಸದಿಗಂತ ವರದಿ ತುಮಕೂರು:
ಖಾಸಗಿ ಬಸ್ ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕು ಊರ್ಡಿಗೆರೆ ಸಮೀಪದ ಸಾತಟ್ಟದಲ್ಲಿ ಮಂಗಳವಾರ ಸಂಭವಿಸಿದೆ.
ಕೋಳಾಲ ಹೋಬಳಿ ಮಿಟ್ರಳ್ಳಿಯ ಗಂಗಣ್ಣ(60) ಮೃತ. ಹಿಂಬದಿ ಸವಾರ ಲಿಂಗಣ್ಣ ಗಾಯಗೊಂಡಿದ್ದು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕ್ಯಾತಸಂದ್ರದಲ್ಲಿ ಪ್ರಕರಣ ದಾಖಲಾಗಿದೆ.



