October 10, 2026
Saturday, October 10, 2026
spot_img

CINE | ‘ಧುರಂಧರ್’ ಯಶಸ್ಸಿನ ಬೆನ್ನಲ್ಲೇ ಸಾರಾ ಕೈಹಿಡಿದ ಅದೃಷ್ಟ: ಡಿ-56 ಚಿತ್ರಕ್ಕೆ ಇವರೇ ಲಕ್ಕಿ ಗರ್ಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲನಟಿಯಾಗಿ ಬಂದು ಈಗ ಗ್ಲಾಮರಸ್ ನಾಯಕಿಯಾಗಿ ಮಿಂಚುತ್ತಿರುವ ಸಾರಾ ಅರ್ಜುನ್ ಸದ್ಯ ಸ್ಯಾಂಡಲ್‌ವುಡ್‌ನಿಂದ ಕಾಲಿವುಡ್‌ವರೆಗೆ ಸಂಚಲನ ಮೂಡಿಸುತ್ತಿದ್ದಾರೆ. ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸರಣಿಯಲ್ಲಿನ ಅಮೋಘ ನಟನೆಯ ನಂತರ, ಈಗ ಸಾರಾ ತಮಿಳಿನ ಸ್ಟಾರ್ ನಟ ಧನುಷ್ ಅವರ 56ನೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಈ ಜೋಡಿಯ ಆಯ್ಕೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ 22 ವರ್ಷಗಳ ವಯಸ್ಸಿನ ಅಂತರ. ಧನುಷ್ ಅವರಿಗೆ ಈಗ 42 ವರ್ಷ, ಸಾರಾ ಅರ್ಜುನ್ ಅವರಿಗೆ ಕೇವಲ 20 ವರ್ಷ. ಈ ಹಿಂದೆ ‘ಧುರಂಧರ್’ ಚಿತ್ರದ ವೇಳೆಯೂ ರಣವೀರ್ ಸಿಂಗ್ ಜೊತೆಗಿನ ನಟನೆಗೆ ಇಂತಹದ್ದೇ ಟೀಕೆಗಳು ಕೇಳಿಬಂದಿದ್ದವು. ಆದರೆ ಸಾರಾ ತಮ್ಮ ಪಕ್ವವಾದ ನಟನೆಯ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

ಈಗ ‘D56’ ಚಿತ್ರದಲ್ಲೂ ಕಥೆಯ ಡಿಮಾಂಡ್‌ಗೆ ತಕ್ಕಂತೆ ಈ ಜೋಡಿ ಒಂದಾಗಲಿದೆಯೇ? ‘ಧುರಂಧರ್’ ಚಿತ್ರದ ಮ್ಯಾಜಿಕ್ ಇಲ್ಲಿಯೂ ಮರುಕಳಿಸುತ್ತಾ? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ವೃತ್ತಿಜೀವನದ ಉತ್ತುಂಗದಲ್ಲಿರುವ ಸಾರಾ ಅವರಿಗೆ ಈ ಸಿನಿಮಾ ದೊಡ್ಡ ಮೈಲಿಗಲ್ಲಾಗುವುದಂತೂ ಖಚಿತ.

Must Read