April 15, 2026
Wednesday, April 15, 2026
spot_img

ಕ್ರೂರ ಪ್ರಪಂಚ! ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಶೇಷಾದ್ರಿಪುರಂ ರೈಲ್ವೆ ಪಾರ್ಲರ್‌ ರಸ್ತೆಯ ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.

ಒಂದೇ ದಿನದ ಮಗು ಇದಾಗಿದ್ದು, ಹೆತ್ತವರೋ ಅಥವಾ ಭೇರೆ ಯಾರೋ ಮಗುವನ್ನು ತೊಟ್ಟಿಗೆ ಎಸೆದಿದ್ದಾರೆ. ಗಂಡು ಶಿಶುವನ್ನು ಕಸದ ತೊಟ್ಟಿಗೆ ಎಸೆದ ರಭಸಕ್ಕೆ ಮಗು ಮೃತಪಟ್ಟಿದೆ.

ಮಗುವಿನ ಮೃತದೇಹ ಕಂಡು ಜನ ಮರುಗಿದ್ದಾರೆ, ಮಕ್ಕಳಿಲ್ಲದೇ ಒದ್ದಾಡುತ್ತಿರುವ ಈ ಕಾಲದಲ್ಲಿ ಮಕ್ಕಳನ್ನು ಹೀಗೆ ಎಸೆಯಲು ಹೇಗೆ ಮನಸ್ಸು ಬರುತ್ತದೆ ಎಂದು ಜನ ಕಣ್ಣೀರಿಟ್ಟಿದ್ದಾರೆ.

ಮಗುವಿನ ಮೃತದೇಹವನ್ನು ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಶೇಷಾದ್ರಿಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ವಿಡಿಯೋಗಳನ್ನು ಕಲೆಹಾಕಿ ಆರೋಪಿಗಳ ಜಾಡು ಸಂಗ್ರಹಿಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !