September 29, 2026
Tuesday, September 29, 2026
spot_img

ಕಾನ್ಸರ್ಟ್‌ನಲ್ಲಿ ಕಳೆದುಹೋಗಿದ್ದ ಬಾಲಕನನ್ನು ಪೋಷಕರ ಜತೆ ಸೇರಿಸಿದ ಸೋನು ನಿಗಮ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಳೇ ಕಾನ್ಸರ್ಟ್‌ ಒಂದರ ವೇಳೆ ನಡೆದ ವಿವಾದದಲ್ಲಿ ಸಿಲುಕಿದ್ದ ಗಾಯಕ ಸೋನು ನಿಗಮ್‌ ಇದೀಗ ಕನ್ನಡಿಗರ ಪ್ರೀತಿಗೆ ಮತ್ತೆ ಪಾತ್ರರಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಕಾನ್ಸರ್ಟ್‌ನಲ್ಲಿ ಕನ್ನಡಿಗರರು ನನ್ನ ಕುಟುಂಬದಂತೆ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಅವರು ಪಾಲ್ಗೊಂಡು, ಕನ್ನಡಿಗರು ನನ್ನ ಕುಟುಂಬವರು ಎಂದು ಪೀಠಿಕೆ ಇಡುತ್ತಲೇ, ಅನಿಸುತಿದೆ ಯಾಕೋ ಇಂದು ಹಾಡು ಹೇಳಿದರು.

ಹಿಂದಿಯ ಎಲ್ಲಾ ಗಾಯನಕ್ಕಿಂತಲೂ ಇದು ತುಂಬಾ ಅದ್ಭುತ ಗಾಯನ ಎಂದು ಅದರ ಫುಲ್​ ಹಾಡನ್ನು ಹೇಳುವ ಮೂಲಕ ಅಲ್ಲಿ ನೆರೆದಿದ್ದವರನ್ನು ರಂಜಿಸಿದರು. ಇದೇ ವೇಳೆ ಆ ಜನಸಂದಣಿಯಲ್ಲಿ ಕಳೆದುಹೋದ ಬಾಲಕನನ್ನು ಹಾಡಿನ ಮೂಲಕ ವೇದಿಕೆಯಲ್ಲಿ ಕೈಹಿಡಿದು ಕರೆತಂದು ಪೋಷಕರಿಗೆ ಒಪ್ಪಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.

Must Read