September 29, 2026
Tuesday, September 29, 2026
spot_img

ಸುರ್ಜೇವಾಲಾ ವಾರ್ನಿಂಗ್‌ಗೂ ಕ್ಯಾರೆ ಎನ್ನದೆ ಫಾರೀನ್‌ ಟ್ರಿಪ್‌ ಹೊರಟ ಕಾಂಗ್ರೆಸ್‌ ಶಾಸಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂಗ್ರೆಸ್‌ ಸರ್ಕಾರದಲ್ಲಿ ಏನೇನೋ ನಡೆಯುತ್ತಿದೆ, ಅಧಿಕಾರ ಹಗ್ಗಜಗ್ಗಾಟ ಒಂದು ಕಡೆಯಾದ್ರೆ ಕೈ ಶಾಸಕರು ಫಾರೀನ್‌ ಟ್ರಿಪ್‌ಗೆ ರೆಡಿಯಾಗಿದ್ದಾರೆ.

ಈ ಬಗ್ಗೆ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ವಾರ್ನಿಂಗ್‌ ನೀಡಿದ್ದಾರೆ. ಆದರೆ ಈ ವಾರ್ನಿಂಗ್‌ ಬಗ್ಗೆ ಶಾಸಕರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. 20ಕ್ಕೂ ಹೆಚ್ಚು ಶಾಸಕರು ಮತ್ತು ಅವರ ಕುಟುಂಬ ಸದಸ್ಯರು ವಿದೇಶ ಪ್ರವಾಸ ಹೊರಡಲಿದ್ದಾರೆ.

ಇದೇ 15 ರಿಂದ ಮಾರ್ಚ್ 3ರ ತನಕ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದ್ದಾರೆ.

ಶಾಸಕರು ಫಾರಿನ್ ಟ್ರಿಪ್ ಹೋಗ್ತಿರೋದು ನನಗೆ ಗೊತ್ತಿಲ್ಲ. ಅವರ ಹಣದಲ್ಲಿ ಅವರು ವಿದೇಶಿ ಪ್ರವಾಸಕ್ಕೆ ಹೋದ್ರೆ ಬೇಡ ಅನ್ನೋಕೆ ಆಗುತ್ತಾ ಅಂತ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Must Read