April 12, 2026
Sunday, April 12, 2026
spot_img

ಜಿಮ್ ಹೋಗೋರೆಲ್ಲ ಪ್ರೊಟೀನ್ ಪ್ರೊಟೀನ್ ಅಂತಿರ್ತಾರಲ್ಲ! ನಿಜ್ವಾಗ್ಲೂ ಇದು ನಮ್ಮ ದೇಹಕ್ಕೆ ಏನ್ ಹೆಲ್ಪ್ ಮಾಡುತ್ತೆ?

ಜಿಮ್‌ಗೆ ಹೊಸದಾಗಿ ಹೋಗೋರು ಆಗಿರ್ಲಿ, ವರ್ಷಗಳಿಂದ ವರ್ಕೌಟ್ ಮಾಡೋರು ಆಗಿರ್ಲಿ… ಎಲ್ಲರ ಮಾತಲ್ಲೂ ಒಂದೇ ಪದ ಕೇಳಿಸ್ತಿರುತ್ತೆ – “ಪ್ರೊಟೀನ್ ತೆಗೆದುಕೊಳ್ಳಿ!” ಅಂತ. ಕೆಲವರಿಗೆ ಇದು ಒಂದು ಟ್ರೆಂಡ್ ಅನಿಸಬಹುದು. ಆದರೆ ಪ್ರೊಟೀನ್ ಅಂದ್ರೆ ಸಿಕ್ಕಾಪಟ್ಟೆ ಫ್ಯಾಷನ್ ಮಾತಲ್ಲ, ನಮ್ಮ ದೇಹಕ್ಕೆ ತುಂಬಾ ಮುಖ್ಯವಾದ ಪೋಷಕಾಂಶ.

ನಾವು ವರ್ಕೌಟ್ ಮಾಡಿದಾಗ, ನಮ್ಮ ಸ್ನಾಯುಗಳು ಸ್ವಲ್ಪ ಒಡೆದು ಮತ್ತೆ ಹೊಸದಾಗಿ ಕಟ್ಟಿಕೊಳ್ಳುತ್ತವೆ. ಆ ಕಟ್ಟಿಕೊಳ್ಳುವ ಪ್ರಕ್ರಿಯೆಗೆ ಬೇಕಾಗೋ ಪ್ರಮುಖ ಶಕ್ತಿ ಪ್ರೊಟೀನ್‌ನಿಂದಲೇ ಸಿಗುತ್ತದೆ. ಅದಕ್ಕಾಗಿಯೇ ಜಿಮ್ ಟ್ರೈನರ್‌ಗಳು “ಪ್ರೊಟೀನ್ ತಿನ್ನಿ” ಅಂತ ಹೇಳ್ತಾರೆ. ಇದು ಸ್ನಾಯುಗಳನ್ನು ಗಟ್ಟಿಗೊಳಿಸುವುದಷ್ಟೇ ಅಲ್ಲ, ದೇಹಕ್ಕೆ ಶಕ್ತಿ ಕೊಡೋದು, ತೂಕ ನಿಯಂತ್ರಣ ಮಾಡೋದು ಮತ್ತು ಬೇಗ ದಣಿವಾಗದಂತೆ ನೋಡಿಕೊಳ್ಳೋದ್ರಲ್ಲೂ ಸಹಾಯ ಮಾಡುತ್ತೆ.

ಇದನ್ನೂ ಓದಿ:

ಇನ್ನೊಂದು ಮುಖ್ಯ ವಿಷಯ ಏನೆಂದರೆ, ಪ್ರೊಟೀನ್ ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚು ಸಮಯ ನೀಡುತ್ತೆ. ಅದರಿಂದ ಅನಾವಶ್ಯಕವಾಗಿ ಮತ್ತೆ ಮತ್ತೆ ತಿನ್ನೋದು ಕಡಿಮೆ ಆಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳೋವರಿಗೂ ಇದು ದೊಡ್ಡ ಸಹಾಯ.

ಜಿಮ್ ಹೋಗೋವರು ಮಾತ್ರ ಅಲ್ಲ, ಸಾಮಾನ್ಯವಾಗಿ ಎಲ್ಲರಿಗೂ ಪ್ರೊಟೀನ್ ಬೇಕೇ ಬೇಕು. ಹಾಲು, ಮೊಸರು, ಬೇಳೆ, ಕಡಲೆ, ಸೋಯಾ ಇಂತಹ ಆಹಾರಗಳಲ್ಲಿ ಸಹಜವಾಗಿಯೇ ಪ್ರೊಟೀನ್ ಸಿಗುತ್ತದೆ. ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡ್ರೆ ದೇಹದ ಬೆಳವಣಿಗೆ, ಶಕ್ತಿ ಮತ್ತು ಆರೋಗ್ಯ ಎಲ್ಲವೂ ಸಮತೋಲನದಲ್ಲಿರುತ್ತವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !