October 4, 2026
Sunday, October 4, 2026
spot_img

SLEEP | ಒಳ್ಳೆ ನಿದ್ದೆಗಾಗಿ ಇಷ್ಟು ಗಂಟೆಗಳ ಮುನ್ನವೇ ಫೋನ್‌ ಎತ್ತಿಟ್ಟುಬಿಡಿ

ಫೋನ್‌ ಬಳಕೆ ಮಾಡುತ್ತಲೇ ನಿದ್ದೆ ಮಾಡ್ತೀವಿ ಅಂತೀರಾ? ನಿಮ್ಮ ನಿದ್ದೆ ಹಾಳು ಮಾಡೋಕೆ ಈ ನೀಲಿ ಸ್ಕ್ರೀನ್‌ ಕಾರಣವಾಗಿದೆ. ರಾತ್ರಿ ಮಲಗುವ ಮುನ್ನ ಮೊಬೈಲ್‌ ಮುಟ್ಟಬೇಡಿ, ನಿಮ್ಮ ಫೋನ್‌ ಬೆಡ್‌ರೂಮ್‌ಗೆ ಎಂಟ್ರಿ ಕೊಡೋದೇ ಬೇಡ. ಫೋನ್‌ ರಿಂಗ್‌ನಲ್ಲಿಟ್ಟು ರೂಮ್‌ ಹೊರಗಿಡಿ. ಎಮರ್ಜೆನ್ಸಿ ಇದ್ದರೆ ಕರೆ ಬರುತ್ತದೆ, ನಿಮಗೆ ಕೇಳಿಸುತ್ತದೆ.

ಎಷ್ಟು ಗಂಟೆ ಮುನ್ನ ಸ್ಕ್ರೀನ್‌ ಬಂದ್‌?

ಮಲಗುವ ಒಂದು ಗಂಟೆಗೂ ಮುನ್ನ ಸ್ಕ್ರೀನ್‌ ಬಂದ್‌ ಮಾಡಿ. ಟಿವಿ, ಲ್ಯಾಪ್‌ಟಾಪ್‌ ಹಾಗೂ ಮೊಬೈಲ್‌ನಿಂದ ದೂರ ಇರಿ. ಪುಸ್ತಕದ ಒಂದೆರಡು ಪುಟ ಓದಿ, ನೆಮ್ಮದಿಯ ನಿದ್ದೆ ಮಾಡಿ.

ನಿದ್ದೆಯಲ್ಲಿ ಮಿಸ್‌ ಆಗಿ ಎಚ್ಚರ ಆದರೂ ಮತ್ತೆ ಮಲಗೋಕೆ ಯೋಚಿಸಿ. ಫೋನ್‌ ಮಾತ್ರ ಮುಟ್ಟಬೇಡಿ. ಒಮ್ಮೆ ಸ್ಕ್ರೀನ್‌ ಮುಟ್ಟಿದರೆ ಮತ್ತೆ ತಕ್ಷಣ ನಿದ್ದೆಗೆ ಜಾರುವ ಮಾತೇ ಇಲ್ಲ.

ಕೆಲಸ ಮುಗಿದ ನಂತರ ಫೋನ್‌, ಲ್ಯಾಪ್‌ಟಾಪ್‌ ತೆಗೆದು ಇಡಿ. ನಿದ್ದೆ ಬರುವಂತೆ ಸಣ್ಣ ಲೈಟ್‌ಗಳನ್ನು ಹಾಕಿಕೊಳ್ಳಿ. ಆಮೇಲೆ ಫುಲ್‌ ಕತ್ತಲಿನಲ್ಲಿ ಮಲಗಿ.

Must Read