April 16, 2026
Thursday, April 16, 2026
spot_img

ಕಿಮ್ಸ್‌ ಆಸ್ಪತ್ರೆಯಲ್ಲಿ ಮೃತದೇಹ ಪ್ಯಾಕ್‌ ಮಾಡೋದಕ್ಕೂ ಹಣ ಕೇಳಿದ ಐವರು ಸಿಬ್ಬಂದಿ ಅಮಾನತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಮೃತದೇಹ ಪ್ಯಾಕ್‌ ಮಾಡೋದಕ್ಕೂ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಅಮಾನತು ಮಾಡಲಾಗಿದೆ.

ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಮಹಿಳೆಯೊಬ್ಬಳ ಶವವನ್ನು ಪ್ಯಾಕ್‌ ಮಾಡಲು ಐವರು ಸಿಬ್ಬಂದಿ ಹಣ ವಸೂಲಿ ಮಾಡಿದ್ದರು. ಸಿಬ್ಬಂದಿಯ ಅಮಾನವೀಯ ಕೃತ್ಯಕ್ಕೆ ಮೃತಳ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದರು. ಲಂಚಾವತಾರ ಬಯಲಾದ ಬಳಿಕ ಹಣ ವಸೂಲಿ ಮಾಡಿದ ಐವರು ಡಿ ಗ್ರೂಪ್‌ ನೌಕರರನ್ನು ಅಮಾನತು ಮಾಡಲಾಗಿದೆ.

ರಾಯಚೂರಿನ ಲಿಂಗಸುಗೂರು ತಾಲೂಕಿನ ಆಶಾಳ ಅಡವಿಬಾವಿ ನಿವಾಸಿಯಾಗಿರೋ ಗದ್ದೆಮ್ಮಾ ಎನ್ನುವವರು ಪಿತ್ತಕೋಶದ ಕಲ್ಲುಗಳಿಂದ ಸುಸ್ತಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು,

ಅವರ ಮೃತದೇಹವನ್ನು ಪ್ಯಾಕ್‌ ಮಾಡಿ ವಾಹನಕ್ಕೆ ತಲುಪಿಸಲು ಸಿಬ್ಬಂದಿ ಲಂಚ ಕೇಳಿದ್ದರು. ಕಡೆಗೂ ಇನ್ನೂರು ರೂಪಾಯಿ ಪಡೆದುಕೊಂಡಿದ್ದರು. ನೋವಿನ ಸಮಯದಲ್ಲೂ ಹಣಕ್ಕೆ ಪೀಡಿಸಿದ್ದು ಮನುಷ್ಯತ್ವ ಇಲ್ಲದ ಕೆಲಸವಾಗಿದೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !