April 10, 2026
Friday, April 10, 2026
spot_img

ಬಂಗಾಳದಲ್ಲಿ ಭಯ ಹುಟ್ಟಿಸಿದ ನಿಫಾ ವೈರಸ್‌: ಸೋಂಕಿತ ನರ್ಸ್ ಹೃದಯಾಘಾತಕ್ಕೆ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ನಿಫಾ ವೈರಸ್‌ ಆತಂಕ ಹೆಚ್ಚಿಸುತ್ತಿದೆ. ಇತ್ತ ನರ್ಸ್ ಒಬ್ಬರು ನಿಫಾ ವೈರಸ್ ಸೋಂಕಿಂತ ಆಸ್ಪತ್ರೆ ದಾಖಲಾಗಿತ್ತು. ಇದೀಗ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನರ್ಸ್ ಇಂದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಜನವರಿ 11 ರಂದು ಪಶ್ಚಿಮ ಬಂಗಾಳದ ಎರಡು ನಿಫಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಈ ಪೈಕಿ ಬರಸಾತ್ ಜಿಲ್ಲೆಯಲ್ಲಿ ಆರೋಗ್ಯ ಕೇಂದ್ರದ ನರ್ಸ್ ನಿಫಾ ವೈರಸ್‌ ಸೋಂಕಿನಿಂದ ಬಳಲಿದ್ದರು. ಜನವರಿ ಮೂರನೇ ವಾರದಲ್ಲಿ ನಿಫಾ ವೈರಸ್ ಸೋಂಕಿನಿಂದ ನರ್ಸ್ ಆರೋಗ್ಯ ತೀವ್ರ ಹದಗೆಟ್ಟಿತ್ತು. ಜನವರಿ ಅಂತ್ಯಕ್ಕೆ ನರ್ಸ್ ಆರೋಗ್ಯ ಸಂಪೂರ್ಣ ಕ್ಷೀಣಿಸಿತ್ತು. ವೆಂಟಿಲೇಟರ್ ಸಪೋರ್ಟ್ ನೀಡಲಾಗಿತ್ತು. ಇಂದು (ಫೆ.12) ಹೃದಯಾಘಾತಕ್ಕೆ ನರ್ಸ್ ಬಲಿಯಾಗಿದ್ದಾರೆ.

ಸತತ ಚಿಕಿತ್ಸೆ ಮೂಲಕ ನಿಫಾ ವೈರಸ್‌ನಿಂದ ಚೇತರಿಸಿಕೊಂಡಿದ್ದರು. ಆದರೆ ಇತರ ಆರೋಗ್ಯ ಸಮಸ್ಯೆ ಉಲ್ಭಣಿಸಿತ್ತು. ಹೀಗಾಗಿ ವೆಂಟಿಲೇಟರ್ ಸಪೋರ್ಟ್ ನೀಡಲಾಗಿತ್ತು. ಇಂದು ಹೃದಯಾಘಾತಕ್ಕೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಡಿಸೆಂಬರ್ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಿಫಾ ವೈರಸ್ ಪತ್ತೆಯಾಗಿತ್ತು. ಈ ಪೈಕಿ ಒಬ್ಬ ಪುರುಷ ನರ್ಸ್ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಪ್ರಕರಣದ ಸಂಪರ್ಕಿತರ ಪರೀಕ್ಷೆ ಮಾಡಲಾಗಿದೆ. ಇದು ನೆಗಟೀವ್ ಆಗಿದೆ. ಹೀಗಾಗಿ ಜನರು ನಿರಾಳರಾಗಿದ್ದಾರೆ. ಇತ್ತ ನರ್ಸ್ ಬಲಿಯಾಗುತ್ತಿದ್ದಂತೆ ತೀವ್ರ ಮುನ್ನಚ್ಚೆರಿಕೆ ವಹಿಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !