February 13, 2026
Friday, February 13, 2026
spot_img

ಹಣ ನೀಡಿದರೆ ತೆಗೆದುಕೊಳ್ಳಿ, ಆದರೆ ಶಿಳ್ಳೆ ಹೊಡೆದು ಹೊರಗೆ ಕಳುಹಿಸಿ: ಸ್ಟಾಲಿನ್ ಘೋಷಣೆಗೆ ವಿಜಯ್ ಕೌಂಟರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನವೇ ರಾಜಕೀಯ ಚಟುವಟಿಕೆ ಚುರುಕು ಪಡೆದುಗೊಂಡಿದ್ದು, ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಇಂದು ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗಳಿಗೆ ತಲಾ 5,000 ಜಮಾ ಮಾಡಿ ಜನರನ್ನು ತನ್ನ ಕಡೆ ಸೆಳೆಯುತ್ತ ಹೆಜ್ಜೆ ಇಟ್ಟರೆ, ರಾಜಕೀಯಕ್ಕೆ ಹೊಸತಾಗಿ ಎಂಟ್ರಿಕೊಟ್ಟ ನಟ ಮತ್ತು ತಮಿಳಗಾ ವೆಟ್ರಿ ಕಳಗಂ (TVK) ಮುಖ್ಯಸ್ಥ ದಳಪತಿ ವಿಜಯ್ ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದ್ದಾರೆ.

ಇತ್ತ ಎಂ.ಕೆ ಸ್ಟಾಲಿನ್ ಮಹಿಳೆಯರ ಖಾತೆಗಳಿಗೆ 5,000 ಜಮಾ ಮಾಡುವ ಘೋಷಣೆಗೆ ವಿಜಯ್ ಟೀಕಿಸಿದ್ದು, ಯಾರಾದರೂ ಹಣವನ್ನು ನೀಡಿದರೆ ಅದನ್ನು ತೆಗೆದುಕೊಳ್ಳಿ, ಆದರೆ ನಿಮ್ಮ ಇಚ್ಛೆಯಂತೆ ಮತ ಹಾಕಿ ಎಂದು ಮತದಾರರಿಗೆ ಹೇಳಿದ್ದಾರೆ.

ನಮ್ಮ ಮತ ಟಿವಿಕೆ ಪಕ್ಷದ ಶಿಳ್ಳೆ ಗುರುತಿನ ಅಭ್ಯರ್ಥಿಗೆ ನೀಡಿ. ಯಾರಾದರೂ ಸಾವಿರಾರು ರೂಪಾಯಿಗಳನ್ನು ನೀಡಲು ಬಂದರೆ ಅದನ್ನು ತೆಗೆದುಕೊಳ್ಳಿ, ಏಕೆಂದರೆ ಅದು ನಿಮ್ಮ ಸ್ವಂತ ಹಣ. ಆದರೆ ಹಣವನ್ನು ತೆಗೆದುಕೊಂಡ ನಂತರ ನಿಮ್ಮ ಇಚ್ಛೆಯಂತೆ ಮತ ಚಲಾಯಿಸಿ. ನಿಮಗೆ ಹಣ ನೀಡಿದವರಿಗೆ ಶಿಳ್ಳೆ ಹೊಡೆದು ಹೊರಗೆ ಕಳುಹಿಸಿ ಎಂದು ಸ್ಟಾಲಿನ್ ಘೋಷಣೆಗೆ ಕೌಂಟರ್ ನೀಡಿದ್ದಾರೆ.

ಡಿಎಂಕೆ ಭಯಪಡುತ್ತಿದೆ. ಯಾಕೆಂದರೆ ಮಹಿಳೆಯರಿಗೆ ನೀಡುವ ಹಣ ಪ್ರತಿ ತಿಂಗಳು 15ನೇ ದಿನಾಂಕದಂದು ಬರುತ್ತದೆ. ಈ ಬಾರಿ ಅದು 13ಕ್ಕೆ ಏಕೆ ಬಂತು? 2,000 ರೂ.ಗಳ ‘ಬೇಸಿಗೆ ವಿಶೇಷ ಪ್ಯಾಕೇಜ್’ ಅನ್ನು ಇದ್ದಕ್ಕಿದ್ದಂತೆ ಏಕೆ ಘೋಷಿಸಲಾಯಿತು? ಈ ವರ್ಷ ಮಾತ್ರ ಬೇಸಿಗೆ ಬಂದಿದೆಯೇ?. ಇದಕ್ಕೆ ಕಾರಣ ಶಿಳ್ಳೆಯನ್ನು ಬೆಂಬಲಿಸುವ ಹೆಚ್ಚುತ್ತಿರುವ ಮಹಿಳೆಯರ ಧ್ವನಿಯಿಂದ ಡಿಎಂಕೆ ಭಯಪಡುತ್ತಿದೆ. ಅದಕ್ಕಾಗಿಯೇ ಸರ್ಕಾರ ಹಣವನ್ನು ಇಷ್ಟು ಬೇಗ ಬಿಡುಗಡೆ ಮಾಡಿದೆ ಎಂದು ಆರೋಪಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !