September 28, 2026
Monday, September 28, 2026
spot_img

ಬೈರತಿ ಬಸವರಾಜ್​ಗೆ ನ್ಯಾಯಾಂಗ ಬಂಧನವೋ, ಪೊಲೀಸ್ ಕಸ್ಟಡಿಯೋ? ನಾಳೆ ಫೈನಲ್‌ ಡಿಶಿಷನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಕೇಸ್‌ಗೆ ಸಂಬಂಧಿಸದಿಂತೆ ಐದನೇ ಆರೋಪಿಯಾಗಿ ಬಂಧನಕ್ಕೆ ಒಳಗಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಪೊಲೀಸ್‌ ಕಸ್ಟಡಿಯೋ ಅಥವಾ ನ್ಯಾಯಾಂಗ ಬಂಧನವೋ ಎನ್ನುವುದು ಗೊತ್ತಾಗಲಿದೆ.

ಬೈರತಿ ಬಸವರಾಜ್​ಗೆ ಸೂಕ್ತ ಚಿಕಿತ್ಸೆ ಕೊಡಿಸಿದ ಬಳಿಕ ನಾಳೆ ಹಾಜರುಪಡಿಸುವಂತೆ 42ನೇ ಎಸಿಜೆಎಂ ನ್ಯಾಯಾಲಯ ಸಿಐಡಿಗೆ ಸೂಚಿಸಿದೆ.

ನಾಳೆ ತಿಂಗಳ ಎರಡನೇ ಶನಿವಾರ ರಜೆಯಾಗಿದ್ದು, ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ತಮ್ಮ ಮನೆಗೆ ಆರೋಪಿಯನ್ನ ಹಾಜರುಪಡಿಸುವಂತೆ ಕೋರ್ಟ್ ತಿಳಿಸಿದೆ. ಬೈರತಿ ಬಸವರಾಜ್​ಗೆ ನ್ಯಾಯಾಂಗ ಬಂಧನವೋ ಅಥವಾ ಪೊಲೀಸ್ ಕಸ್ಟಡಿಯೋ? ಎಂಬ ಭೀತಿ ಕಾಡಿದ್ದು, ನಾಳೆ ಇದಕ್ಕೆ ಉತ್ತರ ಸಿಗಲಿದೆ.

ನಿರೀಕ್ಷಣಾ ಜಾಮೀನು ರದ್ದಾಗುತ್ತಿದ್ದಂತೆ ನಿನ್ನೆ ಗುಜರಾತ್​ನ ಅಹಮದಾಬಾದ್​ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ವಶಕ್ಕೆ ಪಡೆಯಲಾಗಿತ್ತು. ತನಿಖಾಧಿಕಾರಿ ಡಿವೈಎಸ್ಪಿ ಗೌತಮ್ ಅವರು ಆರೋಪಿಯನ್ನ ವಿಚಾರಣೆ ನಡೆಸಿ, ಬಂಧನ ಪ್ರಕ್ರಿಯೆ ನಡೆಸಿದರು. ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

Must Read