May 8, 2026
Friday, May 8, 2026
spot_img

ಶುಭರಾತ್ರಿ | ರಾತ್ರಿ ಮಲಗೋ ಮುನ್ನ ಈ ಸಣ್ಣ ಕೆಲಸ ಮಾಡಿ ಸಾಕು: ನಿದ್ದೆಗೆ ಜಾರಿದ್ದೇ ಗೊತ್ತಾಗಲ್ಲ

ರಾತ್ರಿ ಹಾಸಿಗೆಯಲ್ಲಿ ಮಲಗಿದರೂ ನಿದ್ರೆ ಮಾತ್ರ ಬರದೇ ಫೋನ್ ಸ್ಕ್ರೋಲ್ ಮಾಡ್ತಾ ಗಂಟೆಗಟ್ಟಲೆ ಕಳೆಯುತ್ತಿದ್ದಿರಾ? ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಇದೇ. ಆದರೆ ಮಲಗೋ ಮುನ್ನ ಒಂದು ಸಣ್ಣ ಹವ್ಯಾಸ ಮಾಡಿಕೊಂಡರೆ, ನಿದ್ದೆ ಯಾವಾಗ ಬಂತು ಅನ್ನೋದೇ ಗೊತ್ತಾಗೋದಿಲ್ಲ.

ನಾವು ಮಲಗೋ ಮುನ್ನ ಮಾಡುವ ಕೆಲವು ಸಣ್ಣ ಕೆಲಸಗಳೇ ನಿದ್ದೆಯನ್ನು ದೂರ ಮಾಡುತ್ತವೆ. ವಿಶೇಷವಾಗಿ ಮೊಬೈಲ್ ಬೆಳಕು, ಟೆನ್ಷನ್ ಆಲೋಚನೆಗಳು ಮತ್ತು ಊಟ ಇದಕ್ಕೆ ಮುಖ್ಯ ಕಾರಣ. ಅದಕ್ಕಾಗಿ ಮಲಗುವ 15 ನಿಮಿಷ ಮೊದಲು ಫೋನ್ ಅನ್ನು ಸಂಪೂರ್ಣವಾಗಿ ದೂರ ಇಡುವುದು ಮೊದಲ ಕೆಲಸ.

ಅದರ ನಂತರ ಒಂದು ಗ್ಲಾಸ್ ಬೆಚ್ಚಗಿನ ನೀರು ಅಥವಾ ಹಾಲು ಕುಡಿಯಬಹುದು. ದೇಹಕ್ಕೆ ಇದು ರಿಲ್ಯಾಕ್ಸ್ ಫೀಲ್ ಕೊಡುತ್ತದೆ. ಜೊತೆಗೆ ಎರಡು ನಿಮಿಷ ನಿಧಾನವಾಗಿ ಉಸಿರಾಟದ ವ್ಯಾಯಾಮ ಮಾಡಿ. ಮೂಗಿನಿಂದ ಆಳವಾಗಿ ಉಸಿರು ತೆಗೆದು ನಿಧಾನವಾಗಿ ಬಿಡಿ. ಹೀಗೆ 10 ಬಾರಿ ಮಾಡಿದರೆ ಮನಸ್ಸು ಶಾಂತವಾಗುತ್ತದೆ.

ಇದನ್ನೂ ಓದಿ:

ಇನ್ನೊಂದು ಸಣ್ಣ ಟಿಪ್ ಅಂದ್ರೆ, ನಿಮ್ಮ ಮನಸ್ಸಿನಲ್ಲಿ ಓಡಾಡುತ್ತಿರುವ ಆಲೋಚನೆಗಳನ್ನು ಒಂದು ಪುಸ್ತಕದಲ್ಲಿ ಬರೆಯಿರಿ. ಇದರಿಂದ ಟೆನ್ಷನ್ ಕಡಿಮೆಯಾಗುತ್ತದೆ.

ಕೊನೆಗೆ ಕೋಣೆಯ ಲೈಟ್ ಅನ್ನು ಮಂದಗೊಳಿಸಿ, ಹಾಸಿಗೆಯಲ್ಲಿ ಆರಾಮವಾಗಿ ಮಲಗಿ. ದೇಹ ಮತ್ತು ಮನಸ್ಸು ರಿಲ್ಯಾಕ್ಸ್ ಆದ ಕ್ಷಣದಿಂದಲೇ ನಿದ್ದೆ ನಿಧಾನವಾಗಿ ಆವರಿಸುತ್ತದೆ.

ಸಣ್ಣ ಬದಲಾವಣೆ, ದೊಡ್ಡ ನಿದ್ರೆ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !