October 10, 2026
Saturday, October 10, 2026
spot_img

Soup |10 ನಿಮಿಷದಲ್ಲಿ ಟೇಸ್ಟಿ ಎಗ್ ಡ್ರಾಪ್ ಸೂಪ್ ರೆಡಿ ಮಾಡಿ

ರಾತ್ರಿ ಊಟಕ್ಕೆ ಲೈಟ್ ಆಗಿ, ಬಿಸಿ ಬಿಸಿ ಏನಾದರೂ ಕುಡಿಯಬೇಕು ಅನಿಸಿದಾಗ ಎಗ್ ಡ್ರಾಪ್ ಸೂಪ್ ಬೆಸ್ಟ್. ಚೈನೀಸ್ ಸ್ಟೈಲ್‌ನ ಈ ಸೂಪ್ ತುಂಬಾ ಟೇಸ್ಟಿ ಆಗಿದ್ದು, ಕೇವಲ 10-15 ನಿಮಿಷಗಳಲ್ಲಿ ಸುಲಭವಾಗಿ ಮಾಡಬಹುದು.

ಬೇಕಾಗುವ ಪದಾರ್ಥಗಳು

ಚಿಕನ್ ಸ್ಟಾಕ್ / ಚಿಕನ್ ಸಾರು – 4 ಕಪ್
ಮೊಟ್ಟೆ – 2 ಅಥವಾ 3
ಕಾರ್ನ್‌ಫ್ಲೋರ್ – 2 ಚಮಚ
ನೀರು – ಅರ್ಧ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಬಿಳಿ ಮೆಣಸು ಪುಡಿ – ½ ಚಮಚ
ಶುಂಠಿ ತುರಿ – ಸ್ವಲ್ಪ
ಸ್ಪ್ರಿಂಗ್ ಓನಿಯನ್ / ಈರುಳ್ಳಿ ದಂಟು – 2 ಚಮಚ
ಎಳ್ಳಿನ ಎಣ್ಣೆ – ½ ಚಮಚ (ಐಚ್ಛಿಕ)

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಚಿಕನ್ ಸ್ಟಾಕ್ ಹಾಕಿ ಕುದಿಯಲು ಇಡಿ. ಅದಕ್ಕೆ ಸ್ವಲ್ಪ ಶುಂಠಿ ಮತ್ತು ಉಪ್ಪು ಸೇರಿಸಿ. ಬೇರೆ ಬೌಲ್‌ನಲ್ಲಿ ಕಾರ್ನ್‌ಫ್ಲೋರ್‌ಗೆ ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಕಲಸಿ, ಇದನ್ನು ಕುದಿಯುತ್ತಿರುವ ನೀರಿಗೆ ನಿಧಾನವಾಗಿ ಸೇರಿಸಿ. ಸೂಪ್ ಸ್ವಲ್ಪ ದಪ್ಪವಾಗುವವರೆಗೆ ಕುದಿಸಿ.

ಇದೀಗ ಒಂದು ಬೌಲ್‌ನಲ್ಲಿ ಮೊಟ್ಟೆಗಳನ್ನು ಚೆನ್ನಾಗಿ ಬೀಟ್ ಮಾಡಿ. ಗ್ಯಾಸ್ ಉರಿಯನ್ನು ಕಡಿಮೆ ಮಾಡಿ, ಮೊಟ್ಟೆಯನ್ನು ನಿಧಾನವಾಗಿ ಸಣ್ಣ ಹಾರದಂತೆ ಸುರಿಯುತ್ತಾ ಚಮಚದಿಂದ ಸುತ್ತುತ್ತಾ ಕಲಸಿ. ಇದರಿಂದ ಸೂಪ್‌ನಲ್ಲಿ ಸುಂದರವಾದ ಮೊಟ್ಟೆಯ ರಿಬ್ಬನ್‌ಗಳು ಬರುತ್ತವೆ.

ಕೊನೆಯಲ್ಲಿ ಮೆಣಸು ಪುಡಿ, ಎಳ್ಳಿನ ಎಣ್ಣೆ ಮತ್ತು ಸ್ಪ್ರಿಂಗ್ ಆನಿಯನ್ ಹಾಕಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ.

ಲೈಟ್ ಡಿನ್ನರ್‌ಗೆ ಇದು ಸೂಪರ್ ಆಯ್ಕೆ!

Must Read