October 10, 2026
Saturday, October 10, 2026
spot_img

ಸಂಜು, ಬ್ರೆವಿಸ್ ಭರ್ಜರಿ ಬ್ಯಾಟಿಂಗ್: ಕೆಕೆಆರ್​ ಗೆಲುವಿಗೆ 193 ರನ್​ಗಳ ಟಾರ್ಗೆಟ್ ನೀಡಿದ ಚೆನ್ನೈ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಜು ಸ್ಯಾಮ್ಸನ್ ,ಡೆವಾಲ್ಡ್​ ಬ್ರೆವಿಸ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್​ಗಳಲ್ಲಿ 5 ವಿಕೆಟ್ 192 ರನ್​ಗಳಿಸಿದ್ದು, ಸವಾಲಿನ ಗುರಿ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ಗೆ ನಾಟಕ ರುತುರಾಜ್ ಗಾಯಕ್ವಾಡ್ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಗಾಯಕ್ವಾಡ್ ಕೇವಲ 7 ರನ್ ಗಳಿಸಿ ಔಟಾದರು. ಮತ್ತೆ ಫಾರ್ಮ್ ಗೆ ಮರಳಿದ ಸಂಜು ಸ್ಯಾಮ್ಸನ್ 48 ರನ್‌ಗಳ ಉತ್ತಮ ಆಟವಾಡಿದರು. ಆಯುಷ್ ಮ್ಹಾತ್ರೆ ಅಬ್ಬರ ಬ್ಯಾಟಿಂಗ್ ಮಾಡಿದ 38 ರನ್ ಗಳಿಸಿದರು.

ಇದರ ನಂತರ ಡೆವಾಲ್ಡ್ ಬ್ರೆವಿಸ್ 41 ರನ್‌ ಗಳಿಸಿ ಔಟ್ ಆದರು. ಸರ್ಫರಾಜ್ 23 ರನ್‌ ಗಾಲ ಕಾಣಿಕೆ ನೀಡಿದರು.ಬಳಿಕ ದುಬೆ ರನ್​ಗಳಿಸಲು ಪರದಾಡಿ 12 ಎಸೆತಗಳಲ್ಲಿ ಅಜೇಯ 13 ರನ್​ಗಳಿಸಿದರೆ, ಓವರ್ಟನ್ ಅಜೇಯ 7 ರನ್​ಗಳಿಸಿದರು.

Must Read