April 9, 2026
Thursday, April 9, 2026
spot_img

ಏನ್ ಗೊತ್ತಾ.. ಐ ಲವ್ ಯೂ ಅಷ್ಟೇ!: ಡಿಂಪಲ್ ಕ್ವೀನ್ ವಿಡಿಯೋ ನೋಡಿ ಅಭಿಮಾನಿಗಳು ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ಕಣ್ಮಣಿ, ಡಿಂಪಲ್ ಕ್ವೀನ್ ರಚಿತಾ ರಾಮ್ ಇಂದು ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ‘ಲ್ಯಾಂಡ್‌ಲಾರ್ಡ್’ ಮತ್ತು ‘ಕಲ್ಟ್’ ಸಿನಿಮಾಗಳ ಬಿಡುವಿಲ್ಲದ ಚಿತ್ರೀಕರಣದ ನಂತರ ಸಣ್ಣ ಬ್ರೇಕ್‌ನಲ್ಲಿರುವ ರಚ್ಚು, ವ್ಯಾಲೆಂಟೈನ್ಸ್ ಡೇ ದಿನದಂದು ತಮ್ಮ ಅಭಿಮಾನಿಗಳಿಗೆ ದೊಡ್ಡ ಸರ್‌ಪ್ರೈಸ್ ನೀಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ರಚಿತಾ, “ಏನ್ ಗೊತ್ತಾ.. ಐ ಲವ್ ಯೂ ಅಷ್ಟೇ!” ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಮುಗುಳ್ನಗೆಯೊಂದಿಗೆ ಅವರು ಹೇಳಿದ ಈ ಮಾತು ಈಗ ಇಂಟರ್ನೆಟ್‌ನಲ್ಲಿ ಕಿಚ್ಚು ಹಚ್ಚಿದೆ.

View this post on Instagram

A post shared by R R (@rachita_instaofficial)

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ, “ಮನೆಯಲ್ಲಿ ನನಗಾಗಿ ಹುಡುಗನನ್ನ ಹುಡುಕುತ್ತಿದ್ದಾರೆ, ಶೀಘ್ರದಲ್ಲೇ ಸಿಹಿ ಸುದ್ದಿ ನೀಡುತ್ತೇನೆ” ಎಂದು ರಚಿತಾ ಹೇಳಿದ್ದರು. ಇದರ ಬೆನ್ನಲ್ಲೇ ಈ ವಿಡಿಯೋ ಬಂದಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ನೆಟ್ಟಿಗರು ಕಾಮೆಂಟ್ ಬಾಕ್ಸ್‌ನಲ್ಲಿ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸುತ್ತಿದ್ದು, ಡಿಂಪಲ್ ಕ್ವೀನ್ ಅವರ ಈ ‘ಸೀಕ್ರೆಟ್’ ಪ್ರಪೋಸಲ್ ಯಾರಿಗೆ ಎಂಬ ಗುಟ್ಟು ಮಾತ್ರ ಇನ್ನೂ ರಟ್ಟಾಗಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !