ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಎಐ ಇಂಪ್ಯಾಕ್ಟ್ ಶೃಂಗಸಭೆ ನಡೆಯಲಿದೆ.
ಎಐ ಕುರಿತು ಅರಿವು ಮೂಡಿಸುವ ಜೊತೆಗೆ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತದ ಯೋಜನೆಗಳನ್ನ ಪ್ರಚುರಪಡಿಸುವ ಕಾರ್ಯ ಈ ಸಮ್ಮೇಳನದಲ್ಲಿ ಆಗಲಿದೆ. ವಿಶ್ವದ ಅನೇಕ ದೇಶಗಳಿಂದ ಟೆಕ್ ಮುಖಂಡರು ಮತ್ತು ಕಂಪನಿಗಳು ಈ ಸಮಿಟ್ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅದರಲ್ಲೂ ಸುಮಾರು 50 ದಕ್ಷಿಣ ದೇಶಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿವೆ.
ಮೊದಲ ಜಾಗತಿಕ ಅತಿದೊಡ್ಡ ಎಐ ಶೃಂಗಸಭೆಯನ್ನ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 5 ಗಂಟೆ ವೇಳೆಗೆ ನವದಹೆಲಿಯ ಭಾರತ್ ಮಂಟಪದಲ್ಲಿ ಉದ್ಘಾಟಿಸಲಿದ್ದಾರೆ. ಎಐನಿಂದ ಮಾನವನ ಬದುಕಿಗೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಎಷ್ಟು ಒಳಿತು? ಎಷ್ಟು ಮಾರಕ ಎಂಬುದನ್ನು ಅರಿಯುವ ಮತ್ತು ನಿವೇದಿಸುವ ಪ್ರಯತ್ನವಾಗಲಿದೆ. ಸಮಗ್ರ ಅಭಿವೃದ್ಧಿಗೆ ಎಐ ಅನ್ನು ಹೇಗೆ ಬಳಸಬಹುದು? ಉದ್ಯೋಗ ಸೃಷ್ಟಿ ಹೆಚ್ಚಿಸುವುದು ಹೇಗೆ ಎಂಬ ಆಯಾಮಗಳ ಬಗ್ಗೆ ಚರ್ಚಿಸಲಾಗುತ್ತದೆ.



