February 16, 2026
Monday, February 16, 2026
spot_img

ಸೋತೂ ಸೋತೂ ಸುಸ್ತಾದ ಪಾಕಿಸ್ತಾನ: ಸಿಟ್ಟಲ್ಲಿ ಟಿವಿ ಒಡೆದು ಹಾಕಿದ ಪಾಕ್‌ ಅಭಿಮಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿನ್ನೆ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಮತ್ತೆ ಪಾಕಿಸ್ತಾನ ಭಾರತದ ವಿರುದ್ಧ ಹೀನಾಯ ಸೋಲು ಕಂಡಿದೆ. ಭಾರತದ ವಿರುದ್ಧ ಗೆಲ್ಲಲೇ ಇಲ್ಲವಲ್ಲ ಎನ್ನುವ ಬೇಸರಕ್ಕೆ ಪಾಕ್‌ ಅಭಿಮಾನಿಯೊಬ್ಬ ತನ್ನ ಟಿವಿಯನ್ನೇ ಒಡೆದುಹಾಕಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ಪಾಕಿಸ್ತಾನ ತಂಡದ ಜೆರ್ಸಿ ತೊಟ್ಟ ಅಭಿಮಾನಿ ತಂಡ ಸೋಲುತ್ತಿದ್ದಂತೆ ಆಕ್ರೋಶಗೊಂಡು ಟಿವಿಯನ್ನು ಎಸೆದು ಆ ನಂತರ ಬ್ಯಾಟ್‌ನಿಂದ ಟಿವಿಯನ್ನು ಪುಡಿ-ಪುಡಿ ಮಾಡಿದ್ದಾನೆ.

ಇದೊಂದು ಪಂದ್ಯ, ಸೋಲು–ಗೆಲುವನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆಯೂ ಭಾರತ ವಿರುದ್ಧ ಪಾಕ್‌ ಸೋತಾಗ ಅಲ್ಲಿನ ಹಲವಾರು ಅಭಿಮಾನಿಗಳು ಟಿವಿ ಒಡೆದು ಹಾಕಿದ ಹಲವಾರು ಘಟನೆಗಳು ನಡೆದಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !