ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಸೇನೆ ಲೆಬನಾನ್–ಸಿರಿಯಾ ಗಡಿ ಭಾಗದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ.
ಲೆಬನಾನ್ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಕದನ ವಿರಾಮ ಜಾರಿಯಾದ ನಂತರ ನಡೆದ ಈ ದಾಳಿ ಪ್ರದೇಶದಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮಜ್ದಲ್ ಅಂಜರ್ ಪ್ರದೇಶದಲ್ಲಿ ಡ್ರೋನ್ ದಾಳಿ ನಡೆಸಿ ಕಾರೊಂದನ್ನು ಗುರಿಯಾಗಿಸಿಕೊಂಡಿದ್ದಾಗಿ ವರದಿಯಾಗಿದೆ.
ಮೃತಪಟ್ಟವರಲ್ಲಿ ಸಿರಿಯಾ ಮೂಲದ ಒಬ್ಬ ವ್ಯಕ್ತಿ ಸೇರಿರುವುದು ದೃಢಪಟ್ಟಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಈ ದಾಳಿ ಕುರಿತು ಇಸ್ರೇಲ್ ಸೇನೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿ, ಪ್ಯಾಲೆಸ್ಟೀನಿಯನ್ ಇಸ್ಲಾಮಿಕ್ ಜಿಹಾದ್ ಸಂಘಟನೆಯ ಸದಸ್ಯರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ:
ನವೆಂಬರ್ 2024ರಲ್ಲಿ ಕದನ ವಿರಾಮ ಜಾರಿಯಾದ ಬಳಿಕ ಇಂತಹ ದಾಳಿ ನಡೆದಿರುವುದು ವಿಶೇಷ. ಆದರೂ ಗಡಿ ಭಾಗಗಳಲ್ಲಿ ನಿಯತಕಾಲಿಕ ದಾಳಿಗಳು ಮುಂದುವರಿದಿವೆ ಎನ್ನಲಾಗುತ್ತಿದೆ. 2023 ಅಕ್ಟೋಬರ್ ನಂತರ ನಡೆದ ಸಂಘರ್ಷಗಳಲ್ಲಿ ಅನೇಕರು ಬಲಿಯಾಗಿದ್ದು, ಪರಿಸ್ಥಿತಿ ಇನ್ನೂ ಶಾಂತವಾಗಿಲ್ಲ.



