February 16, 2026
Monday, February 16, 2026
spot_img

SHOCKING | ನೀರು ತುಂಬಿದ ಗುಂಡಿಗೆ ಬಿದ್ದು ಮೂರು ವರ್ಷದ ಕಂದಮ್ಮ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗ್ರೇಟರ್‌ ನೋಯ್ಡಾದ ದಲೇಲ್‌ಗಢ ಗ್ರಾಮದಲ್ಲಿ ನೀರು ತುಂಬಿದ ಗುಂಡಿಗೆ ಬಿದ್ದು ಮೂರು ವರ್ಷದ ಕಂದಮ್ಮ ಮೃತಪಟ್ಟಿದೆ.

ದೆಹಲಿ ಎನ್‌ಸಿಆರ್‌ನಾದ್ಯಂತ ಅವೈಜ್ಞಾನಿಕ ಗುಂಡಿಗಳಿವೆ. ಈ ಗುಂಡಿಗಳಿಂದ ಈಗಾಗಲೇ ಸಾಕಷ್ಟು ಹಾನಿಯಾಗಿದೆ. ಮೂರು ವರ್ಷದ ಬಾಲಕ ದೇವಾಂಶ್‌ ದೇವಾಲಯದ ಬಳಿ ಗುಂಡಿಗೆ ಬಿದ್ದಿದ್ದಾನೆ.

ಸಮುದಾಯವೊಂದಕ್ಕೆ ಸಂಬಂಧಿಸಿದ ಹಬ್ಬ ನಡೆಯುವ ವೇಳೆ ಮಗು ತನ್ನ ತಂದೆಯ ಜತೆ ದೇವಸ್ಥಾನಕ್ಕೆ ಬಂದಿತ್ತು. ದೇವಸ್ಥಾನದ ಹೊರಗೆ ಮಳೆನೀರು ತುಂಬಿದ್ದ ಆಳವಾದ ಗುಂಡಿ ಇತ್ತು. ಆಟವಾಡುತ್ತಾ ಮಗು ಗುಂಡಿಗೆ ಬಿದ್ದಿದೆ. ತಕ್ಷಣವೇ ಮಗುವನ್ನು ರಕ್ಷಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಅಷ್ಟರೊಳಗಾಗಲೇ ಮಗು ಮೃತಪಟ್ಟಿದೆ.

ದೇವಸ್ಥಾನಕ್ಕೆಂದು ಹೋದ ಮಗು ವಾಪಾಸ್‌ ಬರಲೇ ಇಲ್ಲ ಎಂದು ಕುಟುಂಬ ರೋಧಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !