ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲುವೆನ್ಸರ್ ರೇಷ್ಮಾ (ಚಿನ್ನು ಪಾಪು) ಅವರ ನಿಗೂಢ ಸಾವಿನ ಬೆನ್ನಲ್ಲೇ, ಅವರ ಆಪ್ತ ಸ್ನೇಹಿತ ಸಂದೇಶ್ ಕೂಡ ಮೃತಪಟ್ಟಿರುವ ಘಟನೆ ಕಾಸರಗೋಡಿನಲ್ಲಿ ತಲ್ಲಣ ಮೂಡಿಸಿದೆ.
‘ಚಿನ್ನು ಪಾಪು’ ಎಂದೇ ಜನಪ್ರಿಯರಾಗಿದ್ದ ರೇಷ್ಮಾ ಕೆ. ಅವರು ಫೆಬ್ರವರಿ 9ರಂದು ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ, ಫೆ. 15 ಅವರ ಆಪ್ತ ಗೆಳೆಯ ಸಂದೇಶ್ ಕೆ. ಕಾಸರಗೋಡಿನ ಮನ್ನಿಪಾಡಿಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ರೇಷ್ಮಾ ಅವರ ಸಾವಿನ ಕುರಿತಾಗಿ ಪೊಲೀಸರು ಇತ್ತೀಚೆಗಷ್ಟೇ ಸಂದೇಶ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಪೊಲೀಸರಿಗೆ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಸಂದೇಶ್ ಕೂಡ ಅದೇ ಹಾದಿ ಹಿಡಿದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಪ್ರಸ್ತುತ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೇಷ್ಮಾ ಮತ್ತು ಸಂದೇಶ್ ಅವರ ಸಾವಿನ ನಡುವೆ ಯಾವುದಾದರೂ ಲಿಂಕ್ ಇದೆಯೇ? ಅಥವಾ ಗೆಳತಿಯ ಸಾವಿನ ನೋವಿನಿಂದ ಸಂದೇಶ್ ಈ ನಿರ್ಧಾರ ಕೈಗೊಂಡಿದ್ದಾರೆಯೇ? ಎಂಬ ಆಯಾಮದಲ್ಲಿ ತನಿಖೆ ಚುರುಕುಗೊಂಡಿದೆ.



