July 12, 2026
Sunday, July 12, 2026
spot_img

ಪಲ್ಯ, ಗ್ರೇವಿ & More 62 | ಉಡುಪಿ-ಮಂಗಳೂರು ಸ್ಪೆಷಲ್ ಅನಾನಸ್ ಮೆಣಸುಕಾಯಿ: ಬಿಸಿ ಬಿಸಿ ಅನ್ನಕ್ಕೆ ಸೂಪರ್ ಆಗಿರುತ್ತೆ

ಸ್ವಲ್ಪ ಸಿಹಿ, ಸ್ವಲ್ಪ ಹುಳಿ, ಸ್ವಲ್ಪ ಖಾರ… ಈ ಮೂರು ರುಚಿಗಳು ಒಂದೇ ಡಿಶ್‌ನಲ್ಲಿ ಸಿಕ್ಕರೆ ಊಟಕ್ಕೆ ಬೇರೆ ಲೆವೆಲ್ ರುಚಿ ಬರುತ್ತೆ. ಅಂತಹ ಸಾಂಪ್ರದಾಯಿಕ ರೆಸಿಪಿಯೇ ಅನಾನಸ್ ಮೆಣಸುಕಾಯಿ, ಅಥವಾ ಅನಾನಸ್ ಗೊಜ್ಜು. ಉಡುಪಿ-ಮಂಗಳೂರು ಭಾಗದ ಮದುವೆ, ಹಬ್ಬಗಳಲ್ಲಿ ಬಹಳ ಜನಪ್ರಿಯವಾದ ಈ ಖಾದ್ಯ ಬಿಸಿ ಅನ್ನದ ಜೊತೆ ಸಖತ್ ರುಚಿ ಕೊಡುತ್ತದೆ. ಇಡ್ಲಿ, ದೋಸೆಯೊಂದಿಗೂ ಸೂಪರ್ ಕಾಂಬಿನೇಷನ್.

ಬೇಕಾಗುವ ಪದಾರ್ಥಗಳು

ಅನಾನಸ್ ತುಂಡುಗಳು – 1½ ಕಪ್
ಬೆಲ್ಲ – 2 ಟೇಬಲ್ ಚಮಚ
ಹುಣಸೆಹಣ್ಣಿನ ರಸ – 2 ಟೇಬಲ್ ಚಮಚ
ಉಪ್ಪು – ರುಚಿಗೆ ತಕ್ಕಷ್ಟು

ಮಸಾಲೆಗೆ

ಎಳ್ಳು – 1 ಟೇಬಲ್ ಚಮಚ
ಒಣ ಮೆಣಸಿನಕಾಯಿ – 4 ರಿಂದ 5
ಉದ್ದಿನಬೇಳೆ – 1 ಟೀ ಸ್ಪೂನ್
ಮೆಂತ್ಯ – ¼ ಟೀ ಸ್ಪೂನ್
ಇಂಗು – ಚಿಟಿಕೆ
ಕರಿಬೇವು – ಸ್ವಲ್ಪ
ತುರಿದ ತೆಂಗಿನಕಾಯಿ – ½ ಕಪ್

ಒಗ್ಗರಣೆಗೆ

ಎಣ್ಣೆ – 1 ಟೀ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಕರಿಬೇವು – ಸ್ವಲ್ಪ
ಮಾಡುವ ವಿಧಾನ

ಮೊದಲು ಅನಾನಸ್ ತುಂಡುಗಳನ್ನು ಸ್ವಲ್ಪ ನೀರು ಮತ್ತು ಬೆಲ್ಲದೊಂದಿಗೆ ಬಾಣಲೆಯಲ್ಲಿ ಹಾಕಿ ಮೆತ್ತಗಾಗುವವರೆಗೆ ಬೇಯಿಸಿ.

ಇನ್ನೊಂದು ಬಾಣಲೆಯಲ್ಲಿ ಎಳ್ಳು, ಒಣ ಮೆಣಸು, ಉದ್ದಿನಬೇಳೆ, ಮೆಂತ್ಯ, ಇಂಗು ಮತ್ತು ಕರಿಬೇವು ಹುರಿದು ಕೊನೆಯಲ್ಲಿ ತೆಂಗಿನಕಾಯಿ ಸೇರಿಸಿ ಸ್ವಲ್ಪ ಹುರಿಯಿರಿ. ಇದನ್ನು ನುಣ್ಣಗೆ ರುಬ್ಬಿಕೊಳ್ಳಿ.

ಈ ಮಸಾಲೆ ಪೇಸ್ಟ್ ಅನ್ನು ಬೇಯಿಸಿದ ಅನಾನಸ್‌ಗೆ ಸೇರಿಸಿ, ಹುಣಸೆ ರಸ ಮತ್ತು ಉಪ್ಪು ಹಾಕಿ ದಪ್ಪವಾಗುವವರೆಗೆ ಕುದಿಸಿ.

ಕೊನೆಯಲ್ಲಿ ಸಾಸಿವೆ-ಕರಿಬೇವಿನ ಒಗ್ಗರಣೆ ಹಾಕಿದರೆ ರುಚಿಯಾದ ಅನಾನಸ್ ಮೆಣಸುಕಾಯಿ ಸಿದ್ಧ.

ಬಿಸಿ ಅನ್ನದ ಜೊತೆ ಇದನ್ನು ಒಮ್ಮೆ ಟ್ರೈ ಮಾಡಿದ್ರೆ ಮತ್ತೆ ಮತ್ತೆ ಮಾಡ್ತೀರಾ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !