February 17, 2026
Tuesday, February 17, 2026
spot_img

Viral | ಡಾಕ್ಟರ್‌ನ ದೇವ್ರು ಅನ್ನೋದು ಇದಕ್ಕೆ: ಜೀವನ್ಮರಣದ ಹೋರಾಟ..! ರೋಗಿಯನ್ನು ಬದುಕಿಸಿದ ವೈದ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಯುವಿನಲ್ಲಿ ಜೀವ-ಮರಣ ಹೋರಾಟ ನಡೆಸುತ್ತಿದ್ದ ರೋಗಿಯೊಬ್ಬರನ್ನು ಮಹಿಳಾ ವೈದ್ಯೆ ಸಮಯೋಚಿತ ಚಿಕಿತ್ಸೆ ನೀಡಿ ಬದುಕುಳಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರೋಗಿಯ ಹೃದಯಬಡಿತ ಸಂಪೂರ್ಣವಾಗಿ ಕಡಿಮೆಯಾಗಿದ್ದ ಪರಿಸ್ಥಿತಿಯಲ್ಲಿ,ನಿರಂತರ ಪ್ರಯತ್ನದಿಂದ ಮತ್ತೆ ಸಾಮಾನ್ಯ ಮಟ್ಟಕ್ಕೆ ತಂದು ಸ್ಥಿರಗೊಳಿಸಿದ್ದನ್ನು ವಿಡಿಯೋ ದಲ್ಲಿ ಕಾಣಬಹುದಾಗಿದೆ. ಆರಂಭದಲ್ಲಿ ನಿಮಿಷಕ್ಕೆ ಕೇವಲ 22 ಬಡಿತಗಳಷ್ಟೇ ಇದ್ದ ಹೃದಯದ ಚಟುವಟಿಕೆ, ವೈದ್ಯೆಯ ಪ್ರಯತ್ನದಿಂದ ನಿಧಾನವಾಗಿ 86 ಬಡಿತಗಳ ಮಟ್ಟಕ್ಕೆ ಏರಿತು.

ಇದನ್ನೂ ಓದಿ:

ವೈದ್ಯಕೀಯ ತಜ್ಞರ ಪ್ರಕಾರ, ಇಂತಹ ಪರಿಸ್ಥಿತಿಯಲ್ಲಿ ಒಬ್ಬ ವೈದ್ಯರು ದೀರ್ಘಕಾಲ ಒಂಟಿಯಾಗಿ ಜೀವ ಉಳಿಸುವ ಕ್ರಮ ಕೈಗೊಳ್ಳುವುದು ಅತ್ಯಂತ ಅಪರೂಪ ಮತ್ತು ಕಷ್ಟಕರ. ಹೃದಯಾಘಾತದಂತಹ ತುರ್ತು ಸ್ಥಿತಿಗಳಲ್ಲಿ ತಕ್ಷಣ ಚಿಕಿತ್ಸೆ ದೊರೆಯದಿದ್ದರೆ ಪ್ರತಿಯೊಂದು ನಿಮಿಷವೂ ಜೀವಾಪಾಯದ ಸಾಧ್ಯತೆ ಹೆಚ್ಚುತ್ತದೆ.

ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಹರಿದಾಡುತ್ತಿದ್ದಂತೆ ಹಲವರು ವೈದ್ಯೆಯ ಸಮರ್ಪಣೆ ಮತ್ತು ಧೈರ್ಯವನ್ನು ಮೆಚ್ಚಿ, ಅವರು ಕೇವಲ ಒಬ್ಬರ ಜೀವವಷ್ಟೇ ಅಲ್ಲ, ಒಂದು ಕುಟುಂಬದ ಭರವಸೆಯನ್ನೂ ಉಳಿಸಿದ್ದಾರೆ ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಆದರೆ ಕೆಲವರು ಇಂತಹ ಸೂಕ್ಷ್ಮ ಕ್ಷಣವನ್ನು ಚಿತ್ರೀಕರಿಸಿ ಹಂಚಿರುವುದರ ಬಗ್ಗೆ ಪ್ರಶ್ನೆಗಳನ್ನೂ ಎತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !