February 17, 2026
Tuesday, February 17, 2026
spot_img

ಬೆಂಗಳೂರಲ್ಲಿ ಗರಿಗರಿ ಮಸಾಲೆದೋಸೆ, ಫಿಲ್ಟರ್ ಕಾಫಿ ಸವಿದ ಅಮೆರಿಕನ್ ರಾಯಭಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್ ಇತ್ತೀಚೆಗೆ ಭಾರತ ಭೇಟಿ ವೇಳೆ ಬೆಂಗಳೂರಿಗೂ ಆಗಮಿಸಿ, ನಗರದ ಅಭಿವೃದ್ಧಿಯನ್ನು ಶ್ಲಾಘಿಸಿದ್ದಾರೆ. ಈ ಭೇಟಿಯ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಗರದ ವಿಶಿಷ್ಟತೆಯ ಬಗ್ಗೆ ರಾಯಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾಗಿ ತಿಳಿಸಿದ್ದಾರೆ.

ಬೆಂಗಳೂರಿನ ಅನುಭವವನ್ನು ಹಂಚಿಕೊಂಡಿರುವ ರಾಯಭಾರಿ, ಇಲ್ಲಿ ಇರುವ ಸ್ಟಾರ್ಟ್‌ಅಪ್ ಸಂಸ್ಕೃತಿ, ತಂತ್ರಜ್ಞಾನ ವಾತಾವರಣ ಮತ್ತು ಬೀದಿಬದಿಯ ತಿಂಡಿಗಳ ವೈವಿಧ್ಯ ಎಲ್ಲವೂ ನಗರಕ್ಕೆ ವಿಶೇಷ ಗುರುತು ತಂದಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತೇಜಸ್ವಿ ಸೂರ್ಯ ಅವರೊಂದಿಗೆ ಸ್ಥಳೀಯ ಆಹಾರವನ್ನು ಸವಿದ ಸಂದರ್ಭದ ಚಿತ್ರವನ್ನೂ ಹಂಚಿಕೊಂಡು ಆತಿಥ್ಯಕ್ಕೆ ಕೃತಜ್ಞತೆ ತಿಳಿಸಿದ್ದಾರೆ.

ಇದನ್ನೂ ಓದಿ:

ಇನ್ನೊಂದೆಡೆ, ಇಂದಿರಾನಗರದಲ್ಲಿ ಫಿಲ್ಟರ್ ಕಾಫಿ ಮತ್ತು ಮಸಾಲ ದೋಸೆ ಸವಿಯುತ್ತಾ ಭಾರತ–ಅಮೆರಿಕ ನಡುವಿನ ಸಂಬಂಧಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಸಿದ್ದಾಗಿ ತೇಜಸ್ವಿ ಸೂರ್ಯ ಹೇಳಿದ್ದಾರೆ. ವ್ಯಾಪಾರ, ತಂತ್ರಜ್ಞಾನ ಮತ್ತು ನವೀನತೆಯ ಕ್ಷೇತ್ರಗಳಲ್ಲಿ ಎರಡು ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಸಹಕಾರದ ಕುರಿತು ಮಾತುಕತೆ ನಡೆದಿದ್ದು, ಆಟೋ ಪ್ರಯಾಣದ ಅನುಭವವೂ ರಾಯಭಾರಿಗೆ ವಿಶೇಷವಾಗಿ ನೆನಪಾಗಿ ಉಳಿದಿದೆ ಎಂದು ಅವರು ತಿಳಿಸಿದ್ದಾರೆ.

ನಗರದಲ್ಲಿ ನೂರಾರು ಅಮೆರಿಕನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಭಾರತ–ಅಮೆರಿಕ ಸಹಭಾಗಿತ್ವ ಬಲಪಡಿಸುವಲ್ಲಿ ಬೆಂಗಳೂರು ಪ್ರಮುಖ ಪಾತ್ರ ವಹಿಸುತ್ತಿದೆ ಎಂಬುದನ್ನೂ ಅವರು ಒತ್ತಿ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !