February 17, 2026
Tuesday, February 17, 2026
spot_img

ಮದುವೆಗೆ ಬರುವವರಿಗೂ ಸ್ಟ್ರಿಕ್ಟ್‌ ರೂಲ್ಸ್‌ ಮಾಡಿದ ರಶ್ಮಿಕಾ ಮಂದಣ್ಣ-ವಿಜಯ್‌ ದೇವರಕೊಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇದೇ ಫೆಬ್ರವರಿ 26ರಂದು ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಹಸೆಮಣೆ ಏರಲಿದ್ದಾರೆ. ಹಲವು ವರ್ಷಗಳ ಡೇಟಿಂಗ್ ನಂತರ ಮದುವೆ ಸುದ್ದಿ ಹೊರಗೆ ಬಿದ್ದಿದ್ದು, ಈಗಲೂ ಸ್ಟಾರ್‌ ಕಪಲ್‌ ಮದುವೆ ಬಗ್ಗೆ ಮೌನ ಮುರಿದಿಲ್ಲ.

ಈ ಹಿಂದೆ ಕನ್ನಡದ ನಟ ರಕ್ಷಿತ್‌ ಜೊತೆ ಜತೆ ಎಂಗೇಜ್‌ ಆದ ರಶ್ಮಿಕಾ ಹಲವು ವರ್ಷಗಳ ನಂತರ ವಿಜಯ್‌ ದೇವರಕೊಂಡ ಅವರನ್ನು ಮದುವೆಯಾಗಲಿದ್ದಾರೆ. ಉದಯಪುರದಲ್ಲಿ ಜೋಡಿ ಮದುವೆಯಾಗಲಿದ್ದು, ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸಿಂಪಲ್‌ ಆಗಿ ಮದುವೆಯಾಗಲಿದ್ದಾರೆ.

ಇನ್ನು ಮಾರ್ಚ್‌ ನಾಲ್ಕರಂದು ಹೈದರಾಬಾದ್‌ನಲ್ಲಿ ನಡೆಯುವ ರಿಸೆಪ್ಷನ್‌ಗೆ ಎಲ್ಲ ಸೆಲೆಬ್ರಿಟಿಗಳನ್ನು ಕರೆಯಲಾಗಿದೆ. ಈ ಸೆಲೆಬ್ರಿಟಿ ಮದುವೆಗೆ ಹೋಗೋ ಜನರಿಗೆ ಸ್ಟ್ರಿಕ್ಟ್‌ ರೂಲ್ಸ್‌ ಇದೆಯಂತೆ!

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ಟೀಂ ಒಂದನ್ನು ಆಯ್ಕೆ ಮಾಡಿದೆ. ಈ ತಂಡ ತಮ್ಮ ಕ್ಯಾಮೆರಾ ಮೂಲಕ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ ಮಾಡಲಿದೆ. ಈ ಫೋಟೋಗನ್ನು ಎಲ್ಲಿಯೂ ರಿವೀಲ್ ಮಾಡುವುದಿಲ್ಲ ಮತ್ತು ಹಂಚಿಕೊಳ್ಳುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡು ಸಹಿ ಹಾಕಿಸಿಕೊಳ್ಳಲಾಗಿದೆ.

ಇನ್ನು, ವಿಜಯ್ ಮದುವೆಗೆ ಆಪ್ತರು ಹಾಗೂ ಸ್ನೇಹಿತರು ಮಾತ್ರ ಭಾಗಿ ಆಗಲಿದ್ದಾರೆ ಎಂದು ವರದಿ ಆಗಿದೆ. ಹೀಗಾಗಿ, ಅವರ್ಯಾರು ಮೊಬೈಲ್ ತರದಂತೆ ಕಠಿಣ ನಿಯಮವನ್ನು ಮಾಡಲಾಗಿದೆ. ಮದುವೆಗೆ ಬರೋ ಅತಿಥಿಗಳು ಮೊಬೈಲ್​​​ ಅನ್ನು ತರುವಂತಿಲ್ಲ. ಮೊಬೈಲ್ ಬಳಕೆ ತಡೆಯಲು ಚೆಕಿಂಗ್ ಇರುತ್ತದೆ. ವಿವಾಹ ನಡೆಯೋ ಜಾಗದಲ್ಲಿಯೂ ಈ ಬಗ್ಗೆ ಕಣ್ಣಿಡಲು ಜನರನ್ನು ನೇಮಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !