ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಟೂರ್ನಿಯಿಂದ ಹೀನಾಯವಾಗಿ ಆಸ್ಟ್ರೇಲಿಯಾ ಹೊರಬಿದ್ದಿದ್ದು, ಜಿಂಬಾಬ್ವೆ ಸೂಪರ್-8 ಹಂತವನ್ನು ಪ್ರವೇಶಿಸಿದೆ.
ಇಂದು ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯ ನಡೆಯಬೇಕಿತ್ತು, ಆದರೆ ಮಳೆಯಿಂದಾಗಿ ಪಂದ್ಯ ರದ್ದಾಗಿದ್ದು, ಇದರಿಂದ 5 ಅಂಕ ಸಂಪಾದಿಸಿದ ಜಿಂಬಾಬ್ವೆ ಸೂಪರ್-8ಕ್ಕೆ ಅರ್ಹತೆ ಪಡೆಯಿತು.
ಶ್ರೀಲಂಕಾ ಈಗಾಗಲೇ ಸೂಪರ್ 8 ಪ್ರವೇಶಿಸಿದೆ. ಜಿಂಬಾಬ್ವೆ 3 ಪಂದ್ಯಗಳಿಂದ 5 ಅಂಕ ಪಡೆದರೆ ಐರ್ಲೆಂಡ್ 4 ಪಂದ್ಯವಾಡಿ 3 ಅಂಕ ಗಳಿಸಿದೆ. ಆಸ್ಟ್ರೇಲಿಯಾಗೆ ಓಮನ್ ಜೊತೆ ಪಂದ್ಯ ಬಾಕಿಯಿದೆ. ಈ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದರೂ ತಂಡದ 4 ಅಂಕ ಮಾತ್ರ ಗಳಿಸಲಿದೆ. ಹೀಗಾಗಿ ಆಸ್ಟ್ರೇಲಿಯಾ ಈಗ ಟೂರ್ನಿಯಿಂದಲೇ ನಿರ್ಗಮಿಸಿದೆ.



