April 15, 2026
Wednesday, April 15, 2026
spot_img

Gold Rate | ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ: ಆಭರಣ ಪ್ರಿಯರ ಮೊಗದಲ್ಲಿ ಮಂದಹಾಸ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಸಿಹಿ ಸುದ್ದಿ! ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದಾಗಿ ಭಾರತದಲ್ಲೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.

ದೇಶಾದ್ಯಂತ ಹಳದಿ ಲೋಹದ ಬೆಲೆ ತುಸು ತಗ್ಗಿದ್ದು, ಪ್ರತಿ ಗ್ರಾಮ್ ಚಿನ್ನಕ್ಕೆ 65 ರೂಪಾಯಿ ಹಾಗೂ ಬೆಳ್ಳಿ ಬೆಲೆಯಲ್ಲಿ 5 ರೂಪಾಯಿ ಕುಸಿತ ದಾಖಲಾಗಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ಕಂಡುಬಂದ ಏರಿಳಿತಗಳು ಇಲ್ಲಿನ ಬೆಲೆಯ ಮೇಲೂ ಪ್ರಭಾವ ಬೀರಿವೆ.

ಬೆಂಗಳೂರಿನಲ್ಲಿ 100 ಗ್ರಾಮ್ ಬೆಳ್ಳಿಯ ಬೆಲೆ 25,500 ರೂಪಾಯಿ ಇದ್ದರೆ, ನೆರೆರಾಜ್ಯಗಳಾದ ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಇದರ ಬೆಲೆ ಸುಮಾರು 26,000 ರೂಪಾಯಿ ತಲುಪಿದೆ.

ಒಟ್ಟಾರೆಯಾಗಿ, ಮದುವೆ ಹಾಗೂ ಹಬ್ಬದ ಸೀಸನ್ ಆರಂಭಕ್ಕೂ ಮುನ್ನ ಬೆಲೆ ತಗ್ಗುತ್ತಿರುವುದು ಗ್ರಾಹಕರಿಗೆ ಸಮಾಧಾನ ತಂದಿದೆ.

ಲೋಹದ ವಿಧಬೆಂಗಳೂರು/ಭಾರತದ ದರ
22 ಕ್ಯಾರಟ್ ಚಿನ್ನ₹ 1,41,350
24 ಕ್ಯಾರಟ್ (ಅಪರಂಜಿ)₹ 1,54,420
ಬೆಳ್ಳಿ (100 ಗ್ರಾಮ್)₹ 25,500

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !