April 16, 2026
Thursday, April 16, 2026
spot_img

ಐಸಿಸಿ Ranking ಪಟ್ಟಿ ಬಿಡುಗಡೆ: ಟಾಪ್ 10ರಲ್ಲಿ ಭಾರತದ ನಾಲ್ವರು ಬ್ಯಾಟರ್‌ಗಳು.. ನಂ.1 ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಟಿ20 ವಿಶ್ವಕಪ್ ಅಬ್ಬರದ ನಡುವೆಯೇ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೂತನ ಟಿ20 ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತೀಯ ಆಟಗಾರರು ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದು, ಯುವ ಆಟಗಾರರ ಅದ್ಭುತ ಪ್ರದರ್ಶನಕ್ಕೆ ಸೂಕ್ತ ಮನ್ನಣೆ ಸಿಕ್ಕಿದೆ.

ವಿಶ್ವಕಪ್‌ನಲ್ಲಿ ಇನ್ನು ಖಾತೆ ತೆರೆಯದಿದ್ದರೂ, ಕಳೆದ ಸರಣಿಗಳ ಅಮೋಘ ಪ್ರದರ್ಶನದ ಆಧಾರದ ಮೇಲೆ ಅಭಿಷೇಕ್ ಶರ್ಮಾ 891 ರೇಟಿಂಗ್ ಅಂಕಗಳೊಂದಿಗೆ ವಿಶ್ವದ ನಂಬರ್ 1 ಬ್ಯಾಟ್ಸ್‌ಮನ್ ಆಗಿ ಮುಂದುವರಿದಿದ್ದಾರೆ. ಉಳಿದಂತೆ ಪ್ರಮುಖ ಬದಲಾವಣೆಗಳು ಹೀಗಿವೆ:

ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಇಶಾನ್ ಕಿಶನ್ ಬರೊಬ್ಬರಿ 17 ಸ್ಥಾನಗಳನ್ನು ಜಿಗಿದು 8ನೇ ಸ್ಥಾನಕ್ಕೇರಿದ್ದಾರೆ.

ಯುವ ಬ್ಯಾಟರ್ ತಿಲಕ್ ವರ್ಮಾ 4ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಪಾಥುಮ್ ನಿಸ್ಸಂಕಾ (3ನೇ ಸ್ಥಾನ) ಮತ್ತು ಸೂರ್ಯಕುಮಾರ್ ಯಾದವ್ (6ನೇ ಸ್ಥಾನ) ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಭಾರತದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ತಮ್ಮ ನಂಬರ್ 1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಅಫ್ಘಾನಿಸ್ತಾನದ ರಶೀದ್ ಖಾನ್ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ಜಿಂಬಾಬ್ವೆಯ ಬೌಲರ್ ಬ್ರಾಡ್ ಇವಾನ್ಸ್ ಬರೊಬ್ಬರಿ 10 ಸ್ಥಾನಗಳನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಆಡಮ್ ಝಂಪಾ (8ನೇ) ಮತ್ತು ಮುಸ್ತಾಫಿಜುರ್ ರೆಹಮಾನ್ (9ನೇ) ಕೂಡ ಟಾಪ್ 10 ರಲ್ಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !