February 18, 2026
Wednesday, February 18, 2026
spot_img

ಆಸ್ಟ್ರೇಲಿಯಾದಲ್ಲಿ ಜನಾಂಗೀಯ ನಿಂದನೆ: ಭಾರತ ಮೂಲದ ನರ್ಸ್ ಮೇಲೆ ಹಲ್ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್: :

ಆಸ್ಟ್ರೇಲಿಯಾದ ಜೀಲಾಂಗ್‌ನಲ್ಲಿ ಭಾರತೀಯ ನರ್ಸ್ ಹರ್ಮನ್ ಪ್ರೀತ್ ಸಿಂಗ್ ಮೇಲೆ ದಾಳಿ ನಡೆದಿದೆ.

ಜೀಲಾಂಗ್ ಎಂಬ ನಗರದ ಸಮೀಪವಿರುವ ಕೊರಿಯೊ ಎಂಬಲ್ಲಿ ಭಾರತೀಯ ಮೂಲದ 22 ವರ್ಷದ ನರ್ಸ್ ಹರ್ಮನ್ ಪ್ರೀತ್ ಸಿಂಗ್ ಜಿಮ್‌ನಲ್ಲಿ ವರ್ಕೌಟ್ ಮುಗಿಸಿ ಹೊರಬರುವಾಗ ಈ ಘಟನೆ ಸಂಭವಿಸಿದೆ.

ಈ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದ್ದು, ಮೂವರು ವ್ಯಕ್ತಿಗಳ ಗುಂಪು ಹರ್ಮನ್ ಅವರ ಮೇಲೆ ಹಲ್ಲೆ ನಡೆಸಿದ್ದು, ಹರ್ಮನ್ ಅವರನ್ನು “ಇಂಡಿಯನ್ ಡಾಗ್” (ಭಾರತೀಯ ನಾಯಿ) ಎಂದು ಜನಾಂಗೀಯವಾಗಿ ನಿಂದಿಸಿದ್ದಾರೆ .

ಹರ್ಮನ್ ಅವರ ಮುಖಕ್ಕೆ ತಲೆಗೆ ಜೋರಾಗಿ ಗುದ್ದಿದ್ದು, ಇದ್ರ ಪರಿಣಾಮ ಮೂಗಿನಿಂದ ರಕ್ತಸ್ರಾವವಾಗಿದೆ . ಹೀಗಾಗಿ ಹರ್ಮನ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !